ನವದೆಹಲಿ: ಇತ್ತೀಚಿಗಷ್ಟೇ ಕೇಂದ್ರ ಸರ್ಕಾರ 7ನೇ ವೇತನ ಆಯೋಗವನ್ನು ಒಪ್ಪಿಕೊಳ್ಳುವ ಮೂಲಕ ಕೇಂದ್ರ ಸರ್ಕಾರ ನೌಕರರಿಗೆ ಬಂಪರ್ ಕೊಡುಗೆ ನೀಡಿತ್ತು. ಆದರೆ ಇದೀಗ ಆ ಬಂಪರ್ ಕೊಡುಗೆಗೆ ನೌಕರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರದ ವಿರುದ್ಧ ಜುಲೈ 11ರಂದು ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.
ಕೇಂದ್ರ ಸರ್ಕಾರಿ ನೌಕರರ ವೇತನ ವನ್ನು ಶೇ 23.55ರಷ್ಟು ಹೆಚ್ಚಿಸಬೇಕು ಎಂದು 7ನೇ ವೇತನ ಆಯೋಗ ಶಿಫಾರಸು ಮಾಡಿದೆ. ಆದರೆ, ವಾಸ್ತವದಲ್ಲಿ ನಿವ್ವಳ ವೇತನ ಏರಿಕೆ ಆಗಿರುವುದು ಕೇವಲ ಶೇ 16ರಷ್ಟು ಮಾತ್ರ. ಅಷ್ಟೇ ಅಲ್ಲ, ಕನಿಷ್ಠ ಮತ್ತು ಗರಿಷ್ಠ ವೇತನ ಏರಿಕೆ ನಡುವೆ ಭಾರಿ ಅಂತರವಿದೆ ಎಂದು ಅಖಿಲ ಭಾರತ ರೇಲ್ವೆ ವ್ಯಕ್ತಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಿವಗೋಪಾಲ್ ಮಿಶ್ರ ಅವರು ಹೇಳಿದ್ದಾರೆ.
ಮೂಲ ವೇತನ 7 ಸಾವಿರ ಇತ್ತು. ಈಗ ಅದನ್ನು 2.57ರಿಂದ ಗುಣಿಸಿ 18 ಸಾವಿರಕ್ಕೆ ನಿಗದಿ ಮಾಡಿದ್ದಾರೆ. ಆದರೆ 3.68ರಿಂದ ಅದನ್ನು ಗುಣಿಸಿಬೇಕು ಎಂದು ಆಗ್ರಹಿಸುತ್ತೇನೆ ಎಂದು ಮಿಶ್ರಾ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಮರು ಪರಿಶೀಲಿಸದಿದ್ದೆ ರಕ್ಷಣಾ ಸಿಬ್ಬಂದಿ ಹೊರತುಪಡಿಸಿ ಸುಮಾರು 33 ಲಕ್ಷ ಕೇಂದ್ರ ಸರ್ಕಾರಿ ನೌಕರರು ಪ್ರತಿಭಟನೆ ಮಾಡಲಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ,
ನ್ಯಾಯಮೂರ್ತಿ ಎ. ಕೆ. ಮಾಥುರ್ ಅವರ ನೇತೃತ್ವದ ಸಮಿತಿ ಗುರುವಾರ ಸಲ್ಲಿಸಿದ 900 ಪುಟಗಳ ವರದಿಯಲ್ಲಿ, ನೌಕರರಿಗೆ ತಿಂಗಳಿಗೆ ಕನಿಷ್ಠ ₹ 18 ಸಾವಿರ ಮತ್ತು ಗರಿಷ್ಠ ₹ 2.ಅ5 ಲಕ್ಷ ವೇತನ ನೀಡಬೇಕು ಎಂದು ಶಿಫಾರಸು ಮಾಡಿತ್ತು. ಕಳೆದ ಇದಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics