ಸ್ವದೇಶಿ ನಿರ್ಮಿತ ವರುಣಾಸ್ತ್ರ (ಸಂಗ್ರಹ ಚಿತ್ರ) 
ದೇಶ

ಬ್ರಹ್ಮೋಸ್ ಆಯ್ತು, ಈಗ ಸ್ವದೇಶಿ ನಿರ್ಮಿತ ವರುಣಾಸ್ತ್ರ ವಿದೇಶಕ್ಕೆ ರಫ್ತು

ಭಾರತದ ದಶಕಗಳ ಕನಸಾಗಿದ್ದ ರಕ್ಷಣಾ ಪರಿಕರಣ ರಫ್ತು ಮಾಡುವ ಕನಸು ಇದೀಗ ನನಸಾಗುತ್ತಿದ್ದು, ಬ್ರಹ್ಮೋಸ್ ಕ್ಷಿಪಣಿ ಬಳಿಕ ಇದೀಗ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ವಿರೋಧಿ ಕ್ಷಿಪಣಿ ವರುಣಾಸ್ತ್ರ ವಿದೇಶಕ್ಕೆ ರಫ್ತಾಗುತ್ತಿದೆ...

ನವದೆಹಲಿ: ಭಾರತದ ದಶಕಗಳ ಕನಸಾಗಿದ್ದ ರಕ್ಷಣಾ ಪರಿಕರಣ ರಫ್ತು ಮಾಡುವ ಕನಸು ಇದೀಗ ನನಸಾಗುತ್ತಿದ್ದು, ಬ್ರಹ್ಮೋಸ್ ಕ್ಷಿಪಣಿ ಬಳಿಕ ಇದೀಗ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ  ವಿರೋಧಿ ಕ್ಷಿಪಣಿ ವರುಣಾಸ್ತ್ರ ವಿದೇಶಕ್ಕೆ ರಫ್ತಾಗುತ್ತಿದೆ.

ಕೇಂದ್ರ ಸರ್ಕಾರ ಮತ್ತು ವಿಯೆಟ್ನಾಂ ಸರ್ಕಾರಗಳು ಈ ಬಗ್ಗೆ ಪರಸ್ಪರ ಮಾತುಕತೆ ನಡೆಸಿದ್ದು, ಜಲಾಂತರ್ಗಾಮಿ ನೌಕೆಗಳನ್ನು ಕ್ಷಣ ಮಾತ್ರದಲ್ಲಿ ಹೊಡೆದುರುಳಿಸುವ ವರುಣಾಸ್ತ್ರ ಕ್ಷಿಪಣಿಗಳನ್ನು  ಭಾರತದಿಂದ ಆಮದು ಮಾಡಿಕೊಳ್ಳಲು ವಿಯೆಟ್ನಾಂ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ. ಈಗಾಗಲೇ ಈ ಬಗ್ಗೆ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಕಳೆದ ಜೂನ್ ನಲ್ಲಿ  ವಿಯೆಟ್ನಾಂ ಪ್ರವಾಸದ ವೇಳೆ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ವರುಣಾಸ್ತ್ರ ರಫ್ತು ಕುರಿತಂತೆ ವಿಯೆಟ್ನಾಂ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಜುಲೈ  ತಿಂಗಳಾಂತ್ಯದಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದ್ದು, ಶೀಘ್ರದಲ್ಲೇ ಒಪ್ಪ೦ದದ ಕುರಿತು ಮತ್ತೆ ಸಭೆ ನಡೆಸಿ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.

ಇದಲ್ಲದೆ ಭಾರತದಿಂದ ಗಸ್ತು ತಿರುಗುವ ಬೋಟ್ ಗಳನ್ನು ಕೂಡ ಖರೀದಿಸುವ ಕುರಿತು ವಿಯೆಟ್ನಾಂ ಆಸಕ್ತಿ ತೋರಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ ವಿಯೆಟ್ನಾಂ ಸೈನಿಕರಿಗೆ ಭಾರತದ  ಸ್ವದೇಶಿ ನಿರ್ಮಿತ ಸುಖೋಯ್ ಯುದ್ಧ ವಿಮಾನದಲ್ಲಿ ತರಬೇತಿ ನೀಡುವ ಕುರಿತು ಮಾತುಕತೆ ನಡೆದಿದ್ದು, ಶೀಘ್ರದಲ್ಲಿಯೇ ವಿಯೆಟ್ನಾಂನ ಸೈನಿಕರ ತಂಡ ಭಾರತಕ್ಕೆ ಆಗಮಿಸಿ ಸುಖೋಯ್  30ಎಂಕೆಐ ವಿಮಾನದಲ್ಲಿ ತರಬೇತಿ ಪಡೆಯಲಿದ್ದಾರೆ.

ಭಾರತ ಮತ್ತು ವಿಯೆಟ್ನಾಂ ಎರಡೂ ರಾಷ್ಟ್ರಗಳಿಗೂ ಚೀನಾ ತಲೆನೋವಾಗಿದ್ದು, ಇದೇ ಕಾರಣಕ್ಕಾಗಿ ವಿಯೆಟ್ನಾಂ ಸರ್ಕಾರ ಭಾರತದೊಂದಿಗೆ ವಿವಿಧ ಯೋಜನೆಗಳಲ್ಲಿ ಕೈಜೋಡಿಸುತ್ತಿದೆ. ಇನ್ನು  ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಪ್ರಾಬಲ್ಯ ಮುರಿಯಲು ಭಾರತದ ಸಹಾಯಕೋರಿರುವ ವಿಯೆಟ್ನಾಂ ಇದೇ ಕಾರಣಕ್ಕಾಗಿ ಭಾರತದೊಂದಿಗೆ ರಕ್ಷಣಾ ಪರಿಕರಗಳ ವ್ಯಾಪರ ವಹಿವಾಟು  ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

ಇನ್ನು ಏಷ್ಯಾ ಖಂಡದಲ್ಲಿ ಹೆಚ್ಚಾಗಿ ರಕ್ಷಣಾ ಪರಿಕರಗಳನ್ನು ರಫ್ತು ಮಾಡುತ್ತಿರುವ ಚೀನಾ ಪ್ರಭಾವ ತಗ್ಗಿಸುವ ನಿಟ್ಟಿನಲ್ಲಿ ಭಾರತಕ್ಕೆ ವಿಯೆಟ್ನಾಂನೊಂದಿಗಿನ ಈ ಒಪ್ಪಂದ ಬಹಳ ಮಹತ್ವದ್ದಾಗಿದ್ದು, ಈ  ಒಪ್ಪಂದದ ಬಳಿಕ ಇತರೆ ರಾಷ್ಟ್ರಗಳು ರಕ್ಷಣಾ ಪರಿಕರಗಳಿಗಾಗಿ ಭಾರತದತ್ತ ಮುಖ ಮಾಡುವ ಸಾಧ್ಯತೆ ಇದೆ.

ವರುಣಾಸ್ತ್ರದ ವಿಶೇಷತೆ ಏನು?


ಇನ್ನು ಪ್ರಸ್ತುತ ವಿಯೆಟ್ನಾಂಗೆ ರವಾನೆಯಾಗುತ್ತಿರುವ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ನೌಕಾ ವಿರೋಧಿ ಕ್ಷಿಪಣಿ ವರುಣಾಸ್ತ್ರ ಸಂಪೂರ್ಣ ಭಾರತದಲ್ಲೇ ನಿರ್ಮಾಣವಾಗಿದ್ದು, ಡಿಆರ್ ಡಿಒ  ಮತ್ತು ನೌಕಾ ರಕ್ಷಣಾ ಪರಿಕರ ಸಂಶೋಧನಾ ಸಂಸ್ಥೆಗಳು ಜಂಟಿಯಾಗಿ ತಯಾರಿಸಿದ ಕ್ಷಿಪಣಿಯಾಗಿದೆ. ಸುಮಾರು 250 ಕಿ.ಮೀ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿರುವ ವರುಣಾಸ್ತ್ರ  ತನ್ನೊಂದಿಗೆ ಸುಮಾರು 250 ಕೆಜಿ ತೂಕದ ಸ್ಫೋಟಕಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಇದರ ತೂಕ ಸುಮಾರು 1.25 ಟನ್ ಗಳಾಗಿದ್ದು, ಗಂಟೆಗೆ ಸುಮಾರು 40 ನಾಟಿಕಲ್ ಮೈಲು  ವೇಗದಲ್ಲಿ ಕ್ರಮಿಸುತ್ತದೆ. ಇತ್ತೀಚೆಗಷ್ಟೇ ಈ ಪ್ರಭಾವಿ ಕ್ಷಿಪಣಿಯನ್ನು ನೌಕಾದಳಕ್ಕೆ ಸೇರಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT