ನವದೆಹಲಿ: ಸರ್ಕಾರಿ ಉದ್ಯೋಗಾಕ್ಷಿಗಳಿಗೆ ಇಲ್ಲೊಂದು ಸಿಹಿ ಸುದ್ದಿ ಇದ್ದು, ಪೊಲೀಸ್ ಪರಿಶೀಲನೆ ವೇಳೆ ಸಾಕಷ್ಟು ಮುಜುಗರ ಅನುಭವಿಸುವುದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಪದ್ಧತಿಯನ್ನೇ ಕೈ ಬಿಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಸರ್ಕಾರಿ ಉದ್ಯೋಗಾಂಕ್ಷಿಗಳು ನೀಡಿದ ದಾಖಲೆಗಳ ಪರಿಶೀಲನೆಗೆ ಈ ಹಿಂದೆ ಇದ್ದ ಪೊಲೀಸ್ ಪರಿಶೀಲನೆಯ ಹಳೆಯ ಪದ್ಧತಿಯನ್ನು ಕೈ ಬಿಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಹಳೆಯ ಪದ್ಧತಿಯ ಬದಲಾಗಿ ಪೂವಾ೯ಪರ ಕುರಿತಾಗಿ ಅಭ್ಯಥಿ೯ ಸಲ್ಲಿಸುವ ಸ್ವಯ೦-ದೃಢೀಕರಣ ದಾಖಲಾತಿಗಳನ್ನು ಪರಿಗಣಿಸಲಾಗುತ್ತದೆ. ಒಂದು ವೇಳೆ ಅಭ್ಯರ್ಥಿ ವಿರುದ್ಧ ಯಾವುದಾದರೂ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದರೆ ಆ ಬಗ್ಗೆ ಅಭ್ಯಥಿ೯ ವಿವರಗಳನ್ನು ಸಲ್ಲಿಸಬೇಕು.
ಅಭ್ಯರ್ಥಿ ನೀಡಿದ ಪ್ರಕರಣಗಳ ಮಾಹಿತಿಯು ನೇಮಕಾತಿ ಪ್ರಾಧಿಕಾರದ ಅಧಿಕಾರಿಗಳಿಗೆ ಒಪ್ಪಿಗೆಯಾದರೆ ತಾತ್ಕಾಲಿಕ ನೇಮಕಾತಿ ಪತ್ರ ನೀಡಿ ಪೊಲೀಸ್ ಪರಿಶೀಲನೆಗೆ ಕಳುಹಿಸಲಾಗುತ್ತದೆ. ಬಳಿಕ ಸ್ಥಳೀಯ ಪೊಲೀಸರು ನೀಡುವ ವರದಿ ಮೇರೆಗೆ ಅಥವಾ ಪರಿಶೀಲನೆ ವೇಳೆ ಯಾವುದೇ ದೂರುಗಳಿಲ್ಲದಿದ್ದರೆ ಅಭ್ಯರ್ಥಿಗೆ ನೀಡಿದ್ದ ತಾತ್ಕಾಲಿಕ ನೇಮಕಾತಿಯನ್ನು ಕಾಯ೦ಗೊಳಿಸಲಾಗುತ್ತದೆ.
ಒಂದು ವೇಳೆ ಅಭ್ಯಥಿ೯ಯು ಸ್ವಯ೦-ದೃಢೀಕರಣದ ವೇಳೆ ಸುಳ್ಳು ಮಾಹಿತಿ ನೀಡಿದ್ದಾನೆ ಎಂದು ಗೊತ್ತಾದರೆ ಅ೦ತಹವರನ್ನು ಅನಹ೯ರೆ೦ದು ಪರಿಗಣಿಸಿ, ಕ್ರಿಮಿನಲ್ ದೂರು ದಾಖಲಿಸುವ ಅವಕಾಶವಿದೆ.