ದೇಶ

ಗಲಭೆಪೀಡಿತ ಪ್ರದೇಶಗಳಲ್ಲಿ ಅಮಾಯಕರನ್ನು ಶಿಕ್ಷಿಸಬೇಡಿ: ಸುಪ್ರೀಂ ಕೋರ್ಟ್

Sumana Upadhyaya
ನವದೆಹಲಿ: ಗಲಭೆಪೀಡಿತ ಅಥವಾ ಅಪರಾಧ ಪ್ರಕರಣ ನಡೆದ ಪ್ರದೇಶಗಳಲ್ಲಿ ಶಸ್ತ್ರ ದಳಗಳ ವಿಶೇಷ ಅಧಿಕಾರಗಳ ಕಾಯ್ದೆ(ಎಎಫ್ಎಸ್ ಪಿಎ)ಯಡಿ ಸೇನಾಪಡೆಗಳು ಪಡೆಯುವ ವಿನಾಯ್ತಿ ಕುರಿತು ಸುಪ್ರೀಂ ಕೋರ್ಟ್ ಶುಕ್ರವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.ತೊಂದರೆಗೀಡಾದ ಪ್ರದೇಶಗಳಲ್ಲಿ ಸೇನಾಪಡೆಗಳು ಮತ್ತು ಪೊಲೀಸರು ದೌರ್ಜನ್ಯ ನಡೆಸಬಾರದು ಎಂದು ಅದು ಹೇಳಿದೆ.
ಮದನ್ ಬಿ. ಲೋಕೂರ್ ಮತ್ತು ಆರ್.ಕೆ.ಅಗರ್ವಾಲ್ ಅವರನ್ನೊಳಗೊಂಡ ಪೀಠ, ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ. ಸಂವಿಧಾನದ ಪರಿಚ್ಛೇದ 32ನ್ನು ಉಲ್ಲೇಖಿಸಿದ ನ್ಯಾಯಪೀಠ, ಮಣಿಪುರದಲ್ಲಿ ನಡೆದ ಸೇನಾಪಡೆ ಮತ್ತು ಪೊಲೀಸರನ್ನೊಳಗೊಂಡ ನಕಲಿ ಎನ್ ಕೌಂಟರ್ ಪ್ರಕರಣಗಳಲ್ಲಿ ಮುಗ್ಧ, ಅಮಾಯಕ ನಾಗರಿಕರು ಸಾವನ್ನಪ್ಪಿರುವ ಪ್ರಕರಣದ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ.
ಭದ್ರತಾ ಪಡೆಗಳು ಅಧಿಕ ಪಡೆಯನ್ನು ಬಳಸಿಕೊಂಡು ಕಾನೂನು ಕ್ರಮದಿಂದ ವಿನಾಯ್ತಿ ಕೋರಬಾರದೆಂದು ಹೇಳಿದೆ.
SCROLL FOR NEXT