ಹೈದರಾಬಾದ್: ಅಪಘಾತದಿಂದಾಗಿ ಕೋಮಾಗೆ ಜಾರಿದ್ದ 10 ವರ್ಷದ ಬಾಲಕಿ ಮೃತ
ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಎದುರುಗಡೆ ಬರುತ್ತಿದ್ದ ಕಾರಿಗೆ ಗುದ್ದಿದ್ದರಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ...
ಹೈದರಾಬಾದ್: ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಎದುರುಗಡೆ ಬರುತ್ತಿದ್ದ ಕಾರಿಗೆ ಗುದ್ದಿದ್ದರಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ 10 ವರ್ಷದ ಬಾಲಕಿ 10 ದಿನಗಳ ನಂತರ ಮೃತಪಟ್ಟಿರುವ ದಾರುಣ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಜುಲೈ 1 ಶುಕ್ರವಾರ ಹೈದರಾಬಾದ್ ನ ಬಂಜಾರ ಹಿಲ್ಸ್ ನಲ್ಲಿ ಈ ಅಪಘಾತ ಸಂಭವಿಸಿತ್ತು. ಇದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ರಮ್ಯಾ 10 ದಿನಗಳಿಂದ ಹೈದರಾಬಾದ್ ನ ಇಂಟೆಸ್ಸಿವ್ ಕೇರ್ ಯುನಿಟ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಲ್ಲಿ ಬದುಕಿದ್ದು ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟಿದ್ದಾಳೆ.
ರಮ್ಯಾ ಮೊದಲ ದಿನದ ಶಾಲೆ ಮುಗಿಸಿ ಚಿಕ್ಕಪ್ಪ ಎಂಜಿನಿಯರ್ ರಾಜೇಶ್, ಹಾಗೂ ತಾಯಿ ರಾಧಿಕಾ, ಅಜ್ಜ ಸೇರಿ ಕಾರಿನಲ್ಲಿ ಬರುತ್ತಿದ್ದಾಗ ಕಂಠಪೂರ್ತಿ ಕುಡಿದಿದ್ದ ಶ್ರಾವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಗೆಳೆಯನ ಅಪ್ಪನ ಹೆಸರಿನಲ್ಲಿದ್ದ ಐ10 ಕಾರನ್ನು ಅತಿ ವೇಗವಾಗಿ ಓಡಿಸಿ ರಮ್ಯಾ ಬರುತ್ತಿದ್ದ ಕಾರಿಗೆ ಗುದಿದ್ದಾನೆ. ಈ ಅವಘಡದಲ್ಲಿ ರಾಜೇಶ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇನ್ನು ರಮ್ಯಾ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು ಕೋಮಾಗೆ ಜಾರಿದ್ದಳು.