ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್(ಸಂಗ್ರಹ ಚಿತ್ರ)
ಮುಂಬೈ: ಜಿಲ್ಲಾ ಪರಿಷತ್ ಮತ್ತು ರಾತ್ರಿ ಶಾಲೆಗಳ ಸ್ಥಿತಿಗತಿಯನ್ನು ಸುಧಾರಣೆ ಮಾಡುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಇತ್ತೀಚೆಗಷ್ಟೆ ಮಾನವ ಸಂಪನ್ಮೂಲ ಇಲಾಖೆಯ ಸಚಿವರಾಗಿ ಅಧಿಕಾರ ಸ್ವೀಕರಿಸಿಕೊಂಡ ಜಾವಡೇಕರ್, ಮುಂಬೈಯ ದದ್ದರ್ ನಲ್ಲಿನ ಗೋಪಾಲಕೃಷ್ಣ ಗೋಖಲೆ ನಿನ್ನೆ ರಾತ್ರಿ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು.
ಮನುಷ್ಯನ ಏಳ್ಗೆಗೆ ಶಿಕ್ಷಣ ಅತಿ ಮುಖ್ಯ. ಹಗಲು ಹೊತ್ತಿನಲ್ಲಿ 8-10 ಗಂಟೆಗಳ ಕಾಲ ದುಡಿದು ರಾತ್ರಿ ವೇಳೆ ಓದಬೇಕೆಂಬ ಈ ಮಕ್ಕಳ ಉತ್ಸಾಹವನ್ನು ಪ್ರಾಮಾಣಿಕವಾಗಿ ಶ್ಲಾಘಿಸುತ್ತೇನೆ ಎಂದು ಹೇಳಿದರು.
ಶಿಕ್ಷಣ ಎಲ್ಲ ಮಕ್ಕಳಿಗೂ ಸಿಗಬೇಕು. ಯಾರು ಕೂಡ ಶಿಕ್ಷಣದಿಂದ ವಂಚಿತರಾಗಬಾರದು.ಜೀವನೋಪಾಯಕ್ಕಾಗಿ ಹಗಲು ಹೊತ್ತಿನಲ್ಲಿ ದುಡಿದು ರಾತ್ರಿ ವೇಳೆ ಶಿಕ್ಷಣ ನೀಡುವ ರಾತ್ರಿ ಶಾಲೆಗಳು ಮತ್ತು ಜಿಲ್ಲಾ ಪರಿಷದ್ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದರು.
ನಿಮ್ಮನ್ನು ನೋಡಿದ ನಂತರ ನನಗೆ ಕೆಲಸ ಮಾಡುವ ಉತ್ಸಾಹ ಹೆಚ್ಚಾಗಿದೆ. ದಲಿತರು, ಸೌಲಭ್ಯಗಳಿಂದ ವಂಚಿತರಾದವರು ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಕೆಲಸ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ರಾತ್ರಿ ಶಾಲೆಗಳ ಸಮಸ್ಯೆಗಳನ್ನು ಅಧ್ಯಯನ ಮಾಡಿ ಅವುಗಳನ್ನು ಬಗೆಹರಿಸಲು ಏನಾದರೊಂದು ಪ್ರಯತ್ನ ಮಾಡುತ್ತೇವೆ ಎಂದು ಜಾವಡೇಕರ್ ಹೇಳಿದರು.
ತಾವು ಜಿಲ್ಲಾ ಪರಿಷದ್ ಶಾಲೆಯಲ್ಲಿ ಓದಿದ್ದು ಎಂದು ಹೇಳಿದ ಜಾವಡೇಕರ್, ಅವರ ಸವಾಲು ಮತ್ತು ಸಮಸ್ಯೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics