ಉಗ್ರ ಹಫೀಜ್ ಸಯ್ಯೀದ್ (ಸಂಗ್ರಹ ಚಿತ್ರ) 
ದೇಶ

ವಾನಿ ಹತ್ಯೆಗೆ ಭಾರತದ ವಿರುದ್ಧ ಪ್ರತೀಕಾರ: ಹಫೀಜ್ ಸಯೀದ್

ಉಗ್ರ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಖಂಡಿಸಿ ಕುಖ್ಯಾತ ಉಗ್ರ ಹಾಗೂ ಜಮಾತ್ ಉದ್ ದವಾ ಉಗ್ರ ಸಂಘಟನೆ ಸಂಸ್ಥಾಪಕ ಹಫೀಜ್ ಸಯ್ಯೀದ್ ಪ್ರತೀಕಾರದ ಎಚ್ಚರಿಕೆ ನೀಡಿದ್ದಾನೆ.

ಇಸ್ಲಾಮಾಬಾದ್: ಉಗ್ರ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಖಂಡಿಸಿ ಕುಖ್ಯಾತ ಉಗ್ರ ಹಾಗೂ ಜಮಾತ್ ಉದ್ ದವಾ ಉಗ್ರ ಸಂಘಟನೆ ಸಂಸ್ಥಾಪಕ ಹಫೀಜ್ ಸಯ್ಯೀದ್ ಪ್ರತೀಕಾರದ ಎಚ್ಚರಿಕೆ  ನೀಡಿದ್ದಾನೆ.

ಭಾನುವಾರ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ಬುರ್ಹಾನ್ ವಾನಿ ಹತ್ಯೆ ಖಂಡಿಸಿ ನಡೆದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಫೀಜ್ ಸಯ್ಯೀದ್, ಒಬ್ಬ ವಾನಿ  ಹತ್ಯೆ ಭಾರತದಲ್ಲಿ ಹತ್ತಾರು ಬುರ್ಹಾನ್ ವಾನಿ ಪ್ರತಿಭಟನೆಗೆ ಕಾರಣವಾಗುತ್ತದೆ. ಕಾಶ್ಮೀರಿಗಳು ಸ್ವಾತಂತ್ರ್ಯ ಪ್ರಿಯರಾಗಿದ್ದು, ತಮ್ಮ ಸ್ವಾತಂತ್ರ್ಯಕ್ಕಾಗಿ ಎಂತಹುದೇ ಸನ್ನಿವೇಶವನ್ನು ಎದುರಿಸಲು  ಸಿದ್ಧರಿರುತ್ತಾರೆ. "ಹುತಾತ್ಮ ಬುರ್ಹಾನ್ ವಾನಿ" ಆತ್ಮಕ್ಕೆ ಶಾಂತಿ ಸಿಗಲಿ, ಕಾಶ್ಮೀರದಲ್ಲಿ ಜಿಹಾದ್ ಪಡೆಗಳಿಗೆ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾನೆ.

ಸಂಪೂರ್ಣ ಉರ್ದುಮಯವಾಗಿದ್ದ ಸಯ್ಯೀದ್ ಭಾಷಣದ ತುಣುಕುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ವೈರಲ್ ಆಗಿದೆ.

ಮುಂದುವರೆದ ಕರ್ಫ್ಯೂ
ಕಾಶ್ಮೀರದಲ್ಲಿ ಶನಿವಾರದಿ೦ದ ನಡೆಯುತ್ತಿರುವ ಗಲಭೆ ಸೋಮವಾರವೂ ಮು೦ದುವರಿದಿದ್ದು, ಮೃತರ ಸ೦ಖ್ಯೆ 32ಕ್ಕೇರಿದೆ. ಎಲ್ಲ 10 ಜಿಲ್ಲೆಗಳಲ್ಲಿಯೂ ಕರ್ಫ್ಯೂ ಹೇರಲಾಗಿದ್ದು, ಜನಜೀವನ  ಸ೦ಪೂಣ೯ ಅಸ್ತವ್ಯಸ್ಥಗೊ೦ಡಿದೆ. 1990ರಲ್ಲಿನ ಕರ್ಫ್ಯೂ ಸನ್ನಿವೇಶದ ನೆನಪಾಗುತ್ತಿದೆ ಎ೦ದು ಕಾಶ್ಮೀರ ನಿವಾಸಿಗಳು ಹೇಳುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iranಗೆ ಅಮೆರಿಕಾ ಬಿಗ್ ಶಾಕ್: 140 ಗುರಿಗಳ ಮೇಲೆ ಭಾರೀ ವೈಮಾನಿಕ ದಾಳಿ; Gulf ರಾಷ್ಟ್ರಗಳತ್ತ ಕ್ಷಿಪಣಿ ಹಾರಿಸಿ Tehran ತಿರುಗೇಟು..!

ಬಂಗಾಳ ಕೊಲ್ಲಿಯಲ್ಲಿ ಭೂಕಂಪ: ವಿಶಾಖಪಟ್ಟಣಂನಲ್ಲೂ ನಡುಗಿದ ಭೂಮಿ, ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆ ದಾಖಲು..!

5ನೇ T20I: ಟ್ರಾಫಿಕ್‌ ಜಾಮ್ ನಲ್ಲಿ ಸಿಲುಕಿದ ಟೀಂ ಇಂಡಿಯಾ, 45 ನಿಮಿಷಗಳ ಕಾಲ ಪಂದ್ಯ ಮುಂದೂಡಿಕೆ!

ಅಮೆರಿಕದಲ್ಲಿ ಕೌಟುಂಬಿಕ ಹಿಂಸಾಚಾರ: ಭಾರತೀಯ ಮೂಲದ ಗೂಗಲ್ ಟೆಕ್ಕಿ ಹತ್ಯೆ; ಮಗನಿಗೂ ಗುಂಡೇಟು!

ಹಾರ್ಮುಜ್ ಜಲಸಂಧಿ ಬಂದ್: ಅಮೆರಿಕಾ ಭೀಕರ ಪ್ರತಿಕಾರದ ದಾಳಿ, ಮಧ್ಯಪ್ರಾಚ್ಯದಲ್ಲಿ ಮತ್ತೆ ಭುಗಿಲೆದ್ದ ಸಂಘರ್ಷ..!