ಆಮ್ ಆದ್ಮಿ ಪಕ್ಷದ ಶಾಸಕ ಭಗವಂತ್ ಮಾನ್ 
ದೇಶ

ಮದ್ಯಪಾನ ಮಾಡಿ ಸಂಸತ್ತಿಗೆ ಬಂದಿದ್ದ ಆಪ್ ಸಂಸದ ಭಗವಂತ್ ಮಾನ್?

ಆಮ್ ಆದ್ಮಿ ಪಕ್ಷದ ಸಂಸದ ಭಗವಂತ್ ಮಾನ್ ಅವರು ಮದ್ಯಪಾನ ಮಾಡಿ ಸಂಸತ್ತಿಗೆ ಬಂದಿದ್ದರು ಎಂಬ ಗಂಭೀರ ಆರೋಪವೊಂದು ಕೇಳಿಬಂದಿದೆ...

ಚಂಡೀಗಢ: ಆಮ್ ಆದ್ಮಿ ಪಕ್ಷದ ಸಂಸದ ಭಗವಂತ್ ಮಾನ್ ಅವರು ಮದ್ಯಪಾನ ಮಾಡಿ ಸಂಸತ್ತಿಗೆ ಬಂದಿದ್ದರು ಎಂಬ ಗಂಭೀರ ಆರೋಪವೊಂದು ಕೇಳಿಬಂದಿದೆ.

ನಿನ್ನೆ ನಡೆದ ಅಧಿವೇಶನದ ವೇಳೆ ಆಮ್ ಆದ್ಮಿ ಪಕ್ಷದ ಸಂಸದ ಭಗವಂತ್ ಮಾನ್ ಅವರು ಕುಡಿದು ಸಂಸತ್ತಿಗೆ ಬಂದಿದ್ದರು ಎಂದು ಕಾಂಗ್ರೆಸ್ ನಾಯಕ ಮತ್ತು ಪಂಜಾಬ್ ಮಾಜಿ ಮುಖ್ಯಂತ್ರಿ ಕ್ಯಾಪ್ಟೆನ್ ಅಮರೀಂದರ್ ಸಿಂಗ್ ಅವರು ಆರೋಪ ಮಾಡಿದ್ದಾರೆ.

ಭಗವಂತ್ ಮಾನ್ ನಂತಹ ಪ್ರತಿನಿಧಿಗಳಿಂದ ಪಂಜಾಬ್ ನ ವರ್ಚಸ್ಸಿನ ಕುರಿತು ಅಪಪ್ರಚಾರವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಹಿಂದೆ ಕೂಡ ಉಚ್ಛಾಟಿತ ಆಪ್ ಪಕ್ಷದ ನಾಯಕ ಯೋಗೇಂದ್ರ ಯಾದವ್ ಅವರು ಕೂಡ ಭಗವಂತ್ ಮಾನ್ ವಿರುದ್ಧ ಕಿಡಿಕಾರಿದ್ದರು. ಸಂಸದ ಭಗವಂತ್ ಮಾನ್ ಅವರು, ಲೋಕಸಭಾ ಅಧಿವೇಶನದ ವೇಳೆ ಪಾನಮತ್ತರಾಗಿ ಬಂದಿದ್ದರು ಎಂದು ಹೇಳಿದ್ದರು.

2014ರ ಜುಲೈ 1ರಂದು ಆಮ್ ಆದ್ಮಿ ಪಕ್ಷ ಲೋಕಸಭೆಯಲ್ಲಿರುವ ತನ್ನ ಎಲ್ಲಾ ಅಭ್ಯರ್ಥಿಗಳನ್ನು ಕೂಗಿ ಸಭೆಯೊಂದನ್ನು ಏರ್ಪಡಿಸಿತ್ತು. ನನ್ನ ಪಕ್ಕದಲ್ಲೇ ಭಗವಂತ್ ಮಾನ್ ಅವರು ಕುಳಿತುಕೊಂಡಿದ್ದರು. ಈ ವೇಳೆ ಅವರು ಮದ್ಯಪಾನ ಮಾಡಿರುವ ವಾಸನೆ ನನಗೆ ಬರುತ್ತಿತ್ತು ಎಂದು ಯೋಗೇಂದ್ರ ಯಾದವ್ ಅವರು ಆರೋಪಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!