ಸ್ಮೃತಿ ಇರಾನಿ 
ದೇಶ

ಸಿಬಿಎಸ್ಇ ಅಧ್ಯಕ್ಷರ ಹುದ್ದೆಗೆ ಸ್ಮೃತಿ ಇರಾನಿ ಆಯ್ಕೆಯ ಅಭ್ಯರ್ಥಿಯನ್ನು ತಿರಸ್ಕರಿಸಿದ ಪ್ರಧಾನಿ ಮೋದಿ!

ಸಿಬಿಎಸ್ಇ ಅಧ್ಯಕ್ಷ ಹುದ್ದೆಗೆ ಮಾಜಿ ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಅವರ ಆಯ್ಕೆಯ ಅಭ್ಯರ್ಥಿಯನ್ನು ಪ್ರಧಾನಿ ನರೇಂದ್ರ ಮೋದಿ ತಿರಸ್ಕರಿಸಿದ್ದಾರೆ.

ನವದೆಹಲಿ: ಸಿಬಿಎಸ್ಇ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್) ಅಧ್ಯಕ್ಷ ಹುದ್ದೆಗೆ ಮಾಜಿ ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿ ಅವರ ಆಯ್ಕೆಯ ಅಭ್ಯರ್ಥಿಯನ್ನು ಪ್ರಧಾನಿ ನರೇಂದ್ರ ಮೋದಿ ತಿರಸ್ಕರಿಸಿದ್ದಾರೆ.

ಸ್ಮೃತಿ ಇರಾನಿ ಮಾನವ ಸಂಪನ್ಮೂಲ ಇಲಾಖೆ ಸಚಿವೆಯಾಗಿದ್ದಾಗ ಡಾ.ಸರ್ವೇಂದ್ರ ವಿಕ್ರಮ್ ಬಹದ್ದೂರ್ ಸಿಂಗ್ ಅವರನ್ನು ಸಿಬಿಎಸ್ಇ ಅಧ್ಯಕ್ಷರ ಹುದ್ದೆಗೆ ಆಯ್ಕೆ ಮಾಡಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೇಮಕಾತಿ ಸಮಿತಿ ಸ್ಮೃತಿ ಇರಾನಿ ಅವರ ಆಯ್ಕೆಯ ಅಭ್ಯರ್ಥಿಯನ್ನು ತಿರಸ್ಕರಿಸಿದೆ.

ಮಾನವ ಸಂಪನ್ಮೂಲ ಇಲಾಖೆಯಿಂದ ಸ್ಮೃತಿ ಇರಾನಿ ಅವರನ್ನು ಜವಳಿ ಖಾತೆಗೆ ವರ್ಗಾವಣೆ ಮಾಡಿದ ನಂತರ ಈ ಬೆಳವಣಿಗೆ ನಡೆದಿದ್ದು, ಇನ್ನು ಮುಂದೆ ಅಧ್ಯಕ್ಷ ಹುದ್ದೆಗೆ ಆಯ್ಕೆ ನಡೆಯಬೇಕಾದರೆ ಸಚಿವಾಲಯದ ಪಾತ್ರ ಇರುವುದಿಲ್ಲ ಎಂದು ನೇಮಕಾತಿ ಸಮಿತಿ ಸ್ಪಷ್ಟಪಡಿಸಿದೆ. 2014 ರ ಡಿಸೇಂಬರ್ ನಿಂದ ಸಿಬಿಎಸ್ಇಗೆ ಪೂರ್ಣಾವಧಿ ಅಧ್ಯಕ್ಷರ ನೇಮಕವಾಗಿಲ್ಲ. ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಈ ಹಿಂದಿನ ಸಚಿವರಾಗಿದ್ದ ಸ್ಮೃತಿ ಇರಾನಿ ಅವರು ಮೂವರ ಹೆಸರನ್ನು ಅಂತಿಮಗೊಳಿಸಿದ್ದರು ಈ ಪೈಕಿ ಡಾ.ಸರ್ವೇಂದ್ರ ವಿಕ್ರಮ್ ಬಹದ್ದೂರ್ ಸಿಂಗ್ ಅವರ ಹೆಸರನ್ನು ಮೊದಲನೇ ಆಯ್ಕೆಯನ್ನಾಗಿಸಿದ್ದರು. ಕಳೆದ ವರ್ಷವೂ ಸಹ ಸ್ಮೃತಿ ಇರಾನಿ ಸೂಚಿಸಿದ್ದ ಅಭ್ಯರ್ಥಿಯನ್ನು ಸಮಿತಿ ತಿರಸ್ಕರಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಖ್ಯಮಂತ್ರಿಯಾಗಿ ನಾಳೆ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರ: ಹೀಗಿದೆ ಕಾರ್ಯಕ್ರಮದ ಭದ್ರತೆ

ವಿಧಾನಸೌಧದಲ್ಲಿರುವ CM ಕಚೇರಿಗೆ ಜ್ಯೋತಿಷಿಗಳ ಭೇಟಿ; ಕುರ್ಚಿ ದಿಕ್ಕು ಬದಲು, ಅಜ್ಜಯ್ಯನ ಫೋಟೋ ಅಳವಡಿಕೆ!

ಸ್ಪೀಕರ್ ಯುಟಿ ಖಾದರ್ ರಿಂದ ಸಿಬ್ಬಂದಿಗೆ ಔತಣಕೂಟ; ಪಕ್ಕಾ ಆಯ್ತಾ ಸಚಿವ ಸ್ಥಾನ?

ಆಳಂದ ಗಲಭೆ ಪ್ರಕರಣ: ರಾಜ್ಯ ಸರ್ಕಾರದ ಆದೇಶ ರದ್ದುಪಡಿಸಲು ರಾಜ್ಯಪಾಲರಿಗೆ ಬಿಜೆಪಿ ಮನವಿ!

ಸಿಬಿಎಸ್‌ಇ ಅಧ್ಯಕ್ಷ, ಕಾರ್ಯದರ್ಶಿ ವರ್ಗಾವಣೆ; OSM ಖರೀದಿ ತನಿಖೆಗೆ ಸಮಿತಿ ರಚನೆ

SCROLL FOR NEXT