ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಕಾಶ್ಮೀರ ಪ್ರವೇಶಿಸಲು ಯತ್ನಿಸಿದ 100 ಶಿವಸೇನಾ ಕಾರ್ಯಕರ್ತರ ಬಂಧನ

ಜಮ್ಮು ಮತ್ತು ಕಾಶ್ಮೀರ ಪ್ರವೇಶಿಸಲು ಯತ್ನಿಸಿದ 100 ಪಂಜಾಬ್ ಶಿವಸೇನಾ ಕಾರ್ಯಕರ್ತರನ್ನು ಶುಕ್ರವಾರ ಬಂಧಿಸಲಾಗಿದೆ.

ಅಮರನಾಥ ಯಾತ್ರೆ (ಸಾಂದರ್ಭಿಕ ಚಿತ್ರ)
Lingaraj Badiger
Updated On : 15 Jul 2016, 7:52 am
ಕತುವಾ(ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರ ಪ್ರವೇಶಿಸಲು ಯತ್ನಿಸಿದ ಸುಮಾರು 100 ಪಂಜಾಬ್ ಶಿವಸೇನಾ ಕಾರ್ಯಕರ್ತರನ್ನು ಶುಕ್ರವಾರ ಬಂಧಿಸಲಾಗಿದೆ.
ಅಮರನಾಥ ಯಾತ್ರೆಗೆ ಸೂಕ್ತ ಭದ್ರತೆ ಕಲ್ಪಿಸುವಂತೆ ಒತ್ತಾಯಿಸಿ ಮೆರವಣಿಗೆ ಮೂಲಕ ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಎನ್.ಎನ್.ವೊಹ್ರಾ ಅವರಿಗೆ ಮನವಿ ನೀಡಲು ಮುಂದಾಗಿದ್ದ ಸುಮಾರು 100 ಶಿವಸೇನಾ ಕಾರ್ಯಕರ್ತರನ್ನು ನಾವು ಬಂಧಿಸಿದ್ದೇವೆ ಎಂದು ಕತುವಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಖಲಿಲ್ ಪೊಸ್ವಾಲ್ ಅವರು ಹೇಳಿದ್ದಾರೆ.
ಲಖನ್ಪುರ ಚೆಕ್ ಪಾಯಿಂಟ್ ಮೂಲಕ ಕಾಶ್ಮೀರ ಪ್ರವೇಶಿಸಲು ಪಂಜಾಬ್ ಶಿವಸೇನಾ ಕಾರ್ಯಕರ್ತರು ಯತ್ನಿಸಿದ್ದರು. 

Advertisement

Advertisement

ಪಾಕಿಸ್ತಾನ ಪ್ರಾಯೋಜಿತ ಉಗ್ರರು ಅಮರನಾಥ ಯಾತ್ರೆಗೆ ಅಡ್ಡಿಪಡಿಸುತ್ತಿದ್ದಾರೆ. ಆದರೆ ಯಾತ್ರೆಗೆ ಯಾವುದೇ ಅಡಚಣೆಯಾಗದಂತೆ ಸೂಕ್ತ ಭದ್ರತೆ ಕೈಗೊಳ್ಳುವಂತೆ ಒತ್ತಾಯಿಸಿ ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ನಾವು ಬಯಸಿದ್ದೇವು ಎಂದು ಪಂಜಾಬ್ ಶಿವಸೇನಾ ಅಧ್ಯಕ್ಷ ಯೋಗರಾಜ್ ಶರ್ಮಾ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement