ರವೀಂದ್ರ ಜಡೇಜಾ 
ದೇಶ

ಸಿಂಹಗಳ ಮುಂದೆ ಸೆಲ್ಫಿಗೆ ಫೋಸ್: ಜಡೇಜಾ ಹೇಳಿಕೆ ಪಡೆದ ಅರಣ್ಯಾಧಿಕಾರಿಗಳು

ಗಿರ್ ಅರಣ್ಯದಲ್ಲಿನ ಸಫಾರಿಗೆ ತೆರಳಿದ್ದ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿ ಜೀಪ್ ನಿಂದ ಕೆಳಗಿಳಿದು ಸಿಂಹಗಳ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದ...

ಅಹಮದಾಬಾದ್: ಗಿರ್ ಅರಣ್ಯದಲ್ಲಿನ ಸಫಾರಿಗೆ ತೆರಳಿದ್ದ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿ ಜೀಪ್ ನಿಂದ ಕೆಳಗಿಳಿದು ಸಿಂಹಗಳ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದ ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಅರಣ್ಯಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ.

ಜಡೇಜಾ ಮತ್ತು ಅವರ ಪತ್ನಿ ಜುನಾಗಢ್ ಜಿಲ್ಲೆಯ ಸಸಾನ್ ಗಿರ್ ನಲ್ಲಿ ಸಿಂಹಗಳ ಜತೆ ಫೋಸ್ ನೀಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಫೋಟೋಗಳನ್ನು ಗಮನಿಸಿದ ಅರಣ್ಯಾಧಿಕಾರಿಗಳು ಭಾರತದ ಕ್ರಿಕೆಟರ್ ನಿಯಮ ಉಲ್ಲಂಘಿಸಿ ಸಫಾರಿ ಜೀಪ್ ನಿಂದ ಕೆಳಕ್ಕಿಳಿದು ಫೋಟೋ ತೆಗೆಸಿಕೊಂಡಿದ್ದರಿಂದ ಹೇಳಿಕೆ ನೀಡುವಂತೆ ಸಮನ್ಸ್ ನೀಡಿದ್ದರು.

ಸಮನ್ಸ್ ಹಿನ್ನೆಲೆ ಜಡೇಜಾ ಅವರು ಹೇಳಿಕೆ ನೀಡಿದ್ದು, ಹೇಳಿಕೆ ಪರಿಶೀಲನೆ ನಂತರ ಅವರ ವಿರುದ್ಧ ಯಾವ ಕ್ರಮಕೈಗೊಳ್ಳಬೇಕು ಎಂಬದನ್ನು ನಿರ್ಧರಿಸಲಾಗುವುದು ಎಂದು ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ಎಪಿ ಸಿಂಗ್ ತಿಳಿಸಿದ್ದಾರೆ.

ಗಿರ್ ರಾಷ್ಟ್ರೀಯ ಉದ್ಯಾನವನ ಸಂರಕ್ಷಿತ ಅರಣ್ಯವಾಗಿದ್ದು ಪ್ರವಾಸಿಗರು ವಾಹನಗಳಿಂದ ಕೆಳಗಿಳಿಯಲು ಅವಕಾಶವಿಲ್ಲ. ಈಗಿದ್ದರು ಜಡೇಜಾ ಅರಣ್ಯದಲ್ಲಿ ವಾಹನದಿಂದ ಕೆಳಕ್ಕಿಳಿದು ಸಿಂಹಗಳ ಜತೆ ಸೆಲ್ಫಿ ತೆಗೆಸಿಕೊಂಡಿದ್ದರ ವಿರುದ್ಧ ಅರಣ್ಯಾಧಿಕಾರಿಗಳು ತನಿಖೆಗೆ ಆದೇಶಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ; ರಾಜ್ಯಸಭಾ ಸದಸ್ಯತ್ವ ನಿರಾಕರಣೆ

ವಿದಾಯದ ಕೊನೇ ಕ್ಷಣದಲ್ಲೂ Siddaramaiah ಮಹತ್ವದ ಕ್ರಮ: ಆಪ್ತ ಕಾರ್ಯದರ್ಶಿ, ವಿಶೇಷಾಧಿಕಾರಿ ವರ್ಗಾವಣೆ

Siddaramaiah Press Meet: 'ಹೈಕಮಾಂಡ್ ಆದೇಶದ ಮೇಲೆ ರಾಜಿನಾಮೆ ನೀಡಿದ್ದೇನೆ': ಸಿದ್ದರಾಮಯ್ಯ ವಿದಾಯದ ಮಾತು

Siddaramaiah ರಾಜಿನಾಮೆ: 'ನಾನು ಆ ಪಕ್ಷದಲ್ಲಿ ಇಲ್ಲದೆ ಇರಬಹುದು, ಆದರೆ ಅವರೊಂದಿಗಿನ ಒಡನಾಟ ಮರೆಯುವಂತದ್ದಲ್ಲ': BC ಪಾಟೀಲ್ ಭಾವುಕ

ಕಾಂಗ್ರೆಸ್ಸಿನ ಕುರ್ಚಿ ಕಚ್ಚಾಟದ ಪ್ರಹಸನ: ಕನ್ನಡಿಗರಿಗೆ ನಯಾಪೈಸೆ ಪ್ರಯೋಜನ ಇಲ್ಲ- ಬಿಜೆಪಿ

SCROLL FOR NEXT