ನವದೆಹಲಿ: ಉದ್ರರಿಗೆ ಪ್ರೇರಣೆ ನೀಡಿದ ಆರೋಪ ಎದುರಿಸುತ್ತಿರುವ ವಿವಾದಿತ ಇಸ್ಲಾಂ ಮತ ಪ್ರಚಾರಕ ಜಾಕೀರ್ ನಾಯಕ್ ತಾನು ಈ ವರ್ಷ ಭಾರತಕ್ಕೆ ಬರುವುದಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ. ಅಲ್ಲದೆ ಉಗ್ರರಿಗೆ ಪ್ರೇರಣೆ ನೀಡಿದ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಸೌದಿ ಅರೇಬಿಯಾದಿಂದ ಸ್ಕೈಪ್ ಮೂಲಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಜಾಕೀರ್ ನಾಯಕ್, ಬಾಂಗ್ಲಾದೇಶದ ಢಾಕಾ ದಾಳಿಕೋರರು ಸೇರಿದಂತೆ ಯಾವುದೇ ಭಯೋತ್ಪಾ ದಕರಿಗೆ ನಾನು ಪ್ರೇರಣೆ ನೀಡಿಲ್ಲ. ನಾನೊಬ್ಬ ಶಾಂತಿದೂತ. ಅಮಾಯಕ ಜನರನ್ನು ಕೊಲ್ಲುವುದಕ್ಕೆ ಇಸ್ಲಾಂನಲ್ಲಿ ನಿರ್ಬಂಧವಿದೆ. ಎಲ್ಲ ರೀತಿಯ ಭಯೋತ್ಪಾದನೆಯನ್ನೂ ನಾನು ವಿರೋಧಿಸುತ್ತೇನೆ. ನನ್ನ ಹೇಳಿಕೆಗಳನ್ನು ಸಂದಭೋìಚಿತವಲ್ಲದ ರೀತಿಯಲ್ಲಿ ಬಿಂಬಿಸುವ ಮೂಲಕ ಮಾಧ್ಯಮಗಳೇ ವಿಚಾರಣೆ ನಡೆಸುತ್ತಿವೆ' ಎಂದು ಹರಿಹಾಯ್ದಿದ್ದಾನೆ.
ನನ್ನ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ನಾನು ಎಲ್ಲಾ ರೀತಿಯ ತನಿಖೆಗೂ ಸಿದ್ಧವಿದ್ದೇನೆ. ಆದರೆ ಈವರೆಗೂ ಸರ್ಕಾರದ ಯಾವುದೇ ಅಧಿಕಾರಿಗಳು ನನ್ನನ್ನು ಸಂಪರ್ಕಿಸಿಲ್ಲ ಎಂದು ಜಾಕೀರ್ ನಾಯಕ್ ಹೇಳಿದ್ದಾರೆ.
"ಪರಿಶೀಲನೆಯಾಗದ ವರದಿಗಳನ್ನು ಆಧರಿಸಿ ಭಾರತೀಯ ಮಾಧ್ಯಮಗಳು ನನ್ನ ಬೆನ್ನತ್ತಿವೆ. ಅರ್ಧಂಬರ್ಧ ವಾಕ್ಯಗಳನ್ನು ಮಾತ್ರ ತೋರಿಸಿ, ತಿರುಚಿದ ದೃಶ್ಯಗಳನ್ನು ಪ್ರಚಾರ ಮಾಡಲಾಗುತ್ತಿದೆ. ಎರಡು ಸಾವಿರ ವಾಕ್ಯಗಳಲ್ಲಿ ನಾನು ಭಯೋತ್ಪಾದನೆಯನ್ನು ಖಂಡಿಸಿದ್ದೇನೆ. ಆ ಪೈಕಿ ಹತ್ತು ವಾಕ್ಯಗಳಲ್ಲಿ ಯಾರೋ ಕೆಲವರು ದ್ವಂದ್ವಾರ್ಥ ಹುಡುಕಬಹುದು. ದುರುದ್ದೇಶದಿಂದ ವಿಡಿಯೋಗಳನ್ನು ತಿರುಚಲಾಗುತ್ತಿದೆ' ಎಂದು ನಾಯಕ್ ಕಿಡಿಕಾರಿದ್ದಾನೆ.