ದೇಶ

ಉತ್ತರಪ್ರದೇಶ: ಕಳ್ಳಬಟ್ಟಿ ಸೇವಿಸಿ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿಕೆ

Vishwanath S
ಅಲಿಗಂಜ್: ಉತ್ತರಪ್ರದೇಶದ ಅಲಿಗಂಜ್ ನಲ್ಲಿ ನಿನ್ನೆ ಕಳ್ಳಬಟ್ಟಿ ಸೇವಿಸಿದ ಪರಿಣಾಮ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿಕೆಯಾಗಿದ್ದು, ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳ ಸೇವಿಸಿದ್ದರಿಂದ ನಿನ್ನೆ 17 ಮಂದಿ ಮೃತಪಟ್ಟಿದ್ದರು. ಇನ್ನು ತೀವ್ರವಾಗಿ ಅಸ್ವಸ್ಥರಾಗಿದ್ದ ನಾಲ್ವರು ಇಂದು ಮೃತಪಟ್ಟಿದ್ದು, ಸಾವಿನ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಇನ್ನು ಪ್ರಕರಣದ ಮುಖ್ಯ ಆರೋಪಿ ಶ್ರೀಪಾಲ್ ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಸರ್ಜನ್ ಸಿಂಗ್ ಹೇಳಿದ್ದಾರೆ. 
ಲುವಾರಿ ದರ್ವಾಜ್ ಹಾಗೂ ಲಾವ್ ಖೇರ್ ಹಳ್ಳಿಯ ಜನತೆ ಹೆಚ್ಚಾಗಿ ಕಳ್ಳಬಟ್ಟಿ ಸೇವಿಸಿದ್ದಾರೆ. ಇನ್ನು ಕಳ್ಳಬಟ್ಟಿ ಸೇವಿಸಿ ಮೃತಪಟ್ಟವರ ಕುಟುಂಬಕ್ಕೆ ಜಿಲ್ಲಾಧಿಕಾರಿ ಅಜಯ್ ಯಾದವ್ ತಲಾ ಎರಡು ಲಕ್ಷ ಪರಿಹಾರ ಘೋಷಿಸಿದ್ದಾರೆ. 
ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಸರ್ಕಾರಿ ಅಧಿಕಾರಿಗಳು ಹಾಗೂ ಮೂವರು ಅಬಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಡಿಐಜಿ ಗೋವಿಂದ ಅಗರ್ವಾಲ್ ತಿಳಿಸಿದ್ದಾರೆ. 
SCROLL FOR NEXT