ದೇಶ

ಕೇರಳದಲ್ಲಿ ಸಿಪಿಎಂ ಹಿಂಸಾಚಾರವನ್ನು ತೆರೆದಿಡಲು ಆರ್ ಎಸ್ ಎಸ್ ಗೆ ಮುಸ್ಲಿಂ ಲೀಗ್ ಸಾಥ್?

Srinivas Rao BV

ತಿರುವನಂತಪುರಂ: ಕೇರಳದಲ್ಲಿ ಸಿಪಿಎಂ ಹಿಂಸಾಚಾರವನ್ನು ಜನರೆದುರು ತೆರೆದಿಡಲು ಆರ್ ಎಸ್ ಎಸ್ ಸಿದ್ಧತೆ ನಡೆಸುತ್ತಿದ್ದು, ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಆರ್ ಎಸ್ಎಸ್ ತನ್ನ ಕಾರ್ಯಕ್ರಮಕ್ಕೆ ಬೆಂಬಲ ನೀಡುವಂತೆ ಭಾರತೀಯ ಮುಸ್ಲಿಂ ಲೀಗ್( ಐಯುಎಂ ಎಲ್) ಬೆಂಬಲ ಕೋರಿದೆ.

"ಕೇರಳದಲ್ಲಿ ಆರ್ ಎಸ್ ಎಸ್ ನಂತೆಯೇ ಭಾರತೀಯ ಮುಸ್ಲಿಂ ಲೀಗ್ ಸಹ ಸಿಪಿಎಂ ನ ಹಿಂಸಾಚಾರದಿಂದ ನಲುಗಿದ್ದು, ಸಿಪಿಎಂ ನ ಹಿಂಸಾಚಾರವನ್ನು ತೆರೆದಿಡುವ ಕಾರ್ಯಕ್ರಮಕ್ಕೆ ಮುಸ್ಲಿಂ ಲೀಗ್ ನ ಬೆಂಬಲ ಕೋರುತ್ತೇವೆ ಎಂದು ಆರ್ ಎಸ್ ಎಸ್ ನ ಮುಖಂಡರೊಬ್ಬರು ಹೇಳಿದ್ದಾರೆ.

ಆರ್ ಎಸ್ ಎಸ್ ಬೆಂಬಲಿತ ಸಂಘಟನೆ ಸರ್ವೋದಯ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಸಿಪಿಎಂ ನಡೆಸಿದ ಹಿಂಸಾಚಾರಕ್ಕೆ ಬಲಿಯಾದ 650 ಹುತಾತ್ಮರನ್ನು ಸ್ಮರಿಸಲಾಗುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಂಘಟನೆಯ ಮುಖಂಡರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಆರ್ ಎಸ್ ಎಸ್ ಹಾಗೂ ಸಿಪಿಎಂ ನ ಗಲಭೆಯ ಪ್ರದೇಶವಾಗಿರುವ ಕಣ್ಣೂರಿನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಆರ್ ಎಸ್ ಎಸ್ ನ ಬೆಂಬಲಿತ ಸಂಘಟನೆಗಳು ಹಾಗೂ ಚುನಾವಣೆಗೆ ಸ್ಪರ್ಧಿಸಿದ್ದ ಸಿಪಿಎಂ ಕಾರ್ಯಕರ್ತರಿಂದ ಕಾಲು ಕಳೆದುಕೊಂಡಿರುವ ಸದಾನಂದನ್ ಮಾಸ್ಟರ್ ಸಹ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

SCROLL FOR NEXT