ನವದೆಹಲಿ: ಸಾಮಾನ್ಯವಾಗಿ ಬಸ್ಸು, ಕಾರು, ಬೈಕ್ ನಾಪತ್ತೆಯಾಗುವುದನ್ನು ನಾವು ನೋಡಿದ್ದೇವೆ. ಆದರೆ ಭಾರತೀಯ ರೈಲ್ವೆಯ ಎಲೆಕ್ಟ್ರಿಕ್ ಇಂಜಿನ್ ನಾಪತ್ತೆಯಾಗಿದೆ ಎಂಬ ಸುದ್ದಿ ಕೇಳುತ್ತಿರುವುದು ಇದೆ ಮೊದಲು ಅಂತ ಕಾಣುತ್ತೆ.
ಹೌದು. ಇಂಥಹದೊಂದು ವಿಲಕ್ಷಣ ಘಟನೆ ಭಾರತೀಯ ರೈಲ್ವೆಯಲ್ಲಿ ಘಟಿಸಿದ್ದು, ಸಾಮಾನ್ಯ ನಿರ್ವಹಣೆಗಾಗಿ ಬರಬೇಕಿದ್ದ ರೈಲ್ವೆ ಇಂಜಿನ್ ಕಳೆದ ಒಂದು ತಿಂಗಳಿಂದ ನಾಪತ್ತೆಯಾಗಿದೆ. ರೈಲ್ವೆ ಇಲಾಖೆ ಇಂಜಿನ್ನ ಹುಡುಕಾಟದಲ್ಲಿ ತೊಡಗಿದೆ.
ಕಳೆದ ಜೂನ್ 15 ರಂದು ನವದೆಹಲಿಯ ತುಘ್ಲಕಾಬಾದ್ನಲ್ಲಿರುವ ರೈಲ್ವೆ ಇಂಜಿನ್ ನಿರ್ವಹಣಾ ಘಟಕಕ್ಕೆ ಸಾಮಾನ್ಯ ನಿರ್ವಹಣೆಗಾಗಿ ನಂ. 23384ರ ಎಲೆಕ್ಟ್ರಿಕ್ ಇಂಜಿನ್ ಬರಬೇಕಿತ್ತು. ಆದರೆ ಇಂಜಿನ್ ಬರಲೇ ಇಲ್ಲ. ಅಧಿಕಾರಿಗಳು ಇಂಜಿನ್ ಕಾರ್ಯನಿಮಿತ್ತ ಬೇರೆಡೆಗೆ ತೆರಳಿರಬಹುದು. ಅದು ಶೀಘ್ರ ವಾಪಸ್ಸು ಬರಬಹುದು ಎಂದು ತಿಂಗಳ ಅಂತ್ಯದವರೆಗೂ ಕಾದಿದ್ದಾರೆ. ಆದರೆ 15 ದಿನ ಕಳೆದರೂ ಸಹ ಇಂಜಿನ್ ಶೆಡ್ಗೆ ಬರಲೇ ಇಲ್ಲ.
ತಕ್ಷಣ ಎಚ್ಚೆತ್ತ ಅಧಿಕಾರಿಗಳು ರೈಲ್ವೆ ಮಂಡಳಿಗೆ ಈ ವಿಷಯವನ್ನು ಮುಟ್ಟಿಸಿದ್ದಾರೆ. ರೈಲ್ವೆ ಮಂಡಳಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಇಂಜಿನ್ ಪತ್ತೆಗಾಗಿ ಭಾರೀ ಹುಡುಕಾಟ ಆರಂಭಿಸಿದೆ. ದೇಶದ ಎಲ್ಲಾ ರೈಲ್ವೆ ವಲಯಗಳಿಗೆ ಮತ್ತು ಸುಮಾರು 60 ಸಾವಿರ ರೈಲ್ವೆ ಲೋಕೋ ಪೈಲೆಟ್ಗಳಿಗೆ ಇಂಜಿನ್ ಹುಡುಕುವಂತೆ ಸೂಚಿಸಿದೆ. ಲೋಕೋ ಪೈಲೆಟ್ಗಳು ಸುಮಾರು 120 ಟನ್ ತೂಕದ ರೈಲ್ವೆ ಇಂಜಿನ್ಗಾಗಿ ಎಲ್ಲೆಡೆ ಹುಡುಕಾಟ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics