ದಿವಾಕರ್-ಪ್ರಿಯಾ 
ದೇಶ

ನಕ್ಸಲ್ ದಾಳಿಯಲ್ಲಿ ಯೋಧ ದಿವಾಕರ್ ಹುತಾತ್ಮ: ಮದುವೆಯಾಗಿ 21 ದಿನಕ್ಕೆ ವಿಧವೆಯಾದ ಪತ್ನಿ

ಬಿಹಾರದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ಮೃತಪಟ್ಟ 10 ಸಿಆರ್ಪಿಎಫ್ ಯೋಧರ ಪೈಕಿ ದಿವಾಕರ್ ಒಬ್ಬರಾಗಿದ್ದು, ಅವರಿಗೆ ಮದುವೆಯಾಗಿ ಆಗಷ್ಟೇ 21 ದಿನವಾಗಿತ್ತು...

ಖಗರಿಯಾ: ಬಿಹಾರದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ಮೃತಪಟ್ಟ 10 ಸಿಆರ್ಪಿಎಫ್ ಯೋಧರ ಪೈಕಿ ದಿವಾಕರ್ ಒಬ್ಬರಾಗಿದ್ದು, ಅವರಿಗೆ ಮದುವೆಯಾಗಿ ಆಗಷ್ಟೇ 21 ದಿನವಾಗಿತ್ತು.

ಹುತಾತ್ಮ ಯೋಧ ದಿವಾಕರ್ ಮತ್ತು ಪ್ರಿಯಾ ಮದುವೆ ಜೂನ್ 27ಕ್ಕೆ ನಡೆದಿತ್ತು. ಮದುವೆ ಬಳಿಕ ಕೆಲಸಕ್ಕೆ ಸೇರಿದ್ದ ದಿವಾಕರ್ ಸೋಮವಾರ ರಾತ್ರಿ ನಡೆದ ನಕ್ಸಲ್ ದಾಳಿಯಲ್ಲಿ ಮೃತಪಟ್ಟಿದ್ದರು. ಮದುವೆಯಾಗಿ 21 ದಿನಕ್ಕೆ ಪತಿಯನ್ನು ಕಳೆದುಕೊಂಡ ಪ್ರಿಯಾ ಕಣ್ಣೀರಿನಲ್ಲಿ ಮುಳುಗಿದ್ದು, ಮನೆಗೆ ಆಸೆಯಾಗಿದ್ದ ಮಗನನ್ನು ಕಳೆದುಕೊಂಡ ಪೋಷಕರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ತನುಕಲಾಲ್ ಅವರಿಗೆ ಐದು ಜನ ಮಕ್ಕಳಿದ್ದು, ದಿವಾಕರ್ ಒಬ್ಬನೇ ಮಗನಾಗಿದ್ದ. ದಿವಾಕರ್ ನಂತರ ನಾಲ್ಕು ಜನ ಹೆಣ್ಣು ಮಕ್ಕಳಿದ್ದು ಅವರ ಮದುವೆ ಚಿಂತೆ ಇದೀಗ ತಂದೆ ತನುಕಲಾಲ್ ಅವರಿಗೆ ಕಾಡುತ್ತಿದೆ.

ಬಿಹಾರದ ಗಯಾ ಮತ್ತು ಔರಂಗಾಬಾದ್ ಜಿಲ್ಲೆಯ ಗಡಿ ಭಾಗ ದುಮ್ರಿ ನಲ್ಲಾ ಅರಣ್ಯ ಪ್ರದೇಶದಲ್ಲಿ ನಕ್ಸಲರು ಹೂತಿಟ್ಟಿದ್ದ ನೆಲಬಾಂಬ್ ಸ್ಪೋಟಗೊಂಡು 10 ಸಿಆರ್ಪಿಎಫ್ ಕಮಾಂಡೋಗಳು ಹುತಾತ್ಮರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆಯೂ ಭಾರತದ ಆರ್ಥಿಕ ಬೆಳವಣಿಗೆ ಬಲಿಷ್ಠ; 500 GW ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಗುರಿ: ಪ್ರಧಾನಿ ಮೋದಿ

Nandini ದರ ಏರಿಕೆ ವಿರುದ್ಧ ಜನಾಕ್ರೋಶಕ್ಕೆ ಮಣಿದ ಸರ್ಕಾರ: ಮೊಸರು ಬೆಲೆ ಕಡಿತಕ್ಕೆ ಸಿಎಂ ಶಿವಕುಮಾರ್ ಸೂಚನೆ!

ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗಿರುವ ಉದ್ಯೋಗಾವಕಾಶ ಮೌಲ್ಯಮಾಪನಕ್ಕೆ ಕರವೇ ಅಭಿಯಾನ

ಯಾರೋ ಅದು DBoss, ಬಾಯಿ ಮುಚ್ಚಿಕೊಂಡಿರಿ: ದರ್ಶನ್ ಅಭಿಮಾನಿಗಳ ಮೇಲೆ ಕಾಂಗ್ರೆಸ್ ಶಾಸಕ ಆಕ್ರೋಶ, Video!

ಒಂದೆ ದಿನದಲ್ಲಿ ಅಂಬಾನಿ ಸಂಪತ್ತಿಗೆ 6 ಶತಕೋಟಿ ಡಾಲರ್ ಸೇರ್ಪಡೆ!