ದ್ರವ್ಯ ಢೋಲಕಿಯ 
ದೇಶ

ಮಗನನ್ನು ಶ್ರೀಸಾಮಾನ್ಯನಂತೆ ದುಡಿಯಲು ಕಳಿಸಿದ ಕೋಟ್ಯಾಧಿಪತಿ!

ಕೋಟ್ಯಾಧಿಪತಿ ತಂದೆಯೊಬ್ಬರು ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದ್ದ ತನ್ನ ಏಕೈಕ ಮಗನನ್ನು ಶ್ರೀಸಾಮಾನ್ಯನಂತೆ....

ಕೊಚ್ಚಿ: ಕೋಟ್ಯಾಧಿಪತಿ ತಂದೆಯೊಬ್ಬರು ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದ್ದ ತನ್ನ ಏಕೈಕ ಮಗನನ್ನು ಶ್ರೀಸಾಮಾನ್ಯನಂತೆ ತಿಂಗಳ ಸಂಬಳಕ್ಕಾಗಿ ದುಡಿಯುವಂತೆ ಕೇರಳಕ್ಕೆ ಕಳಿಸಿದ್ದಾರೆ!
ಹೌದು. ಇದು ಅಚ್ಚರಿಯನಿಸಿದರು ನಿಜ. ವಿಶ್ವದ ಸುಮಾರು 71 ದೇಶಗಳಲ್ಲಿ ಕಂಪನಿ ಹೊಂದಿರುವ ಸೂರತ್ ಮೂಲದ ಗುಜರಾತಿ ವಜ್ರ ವ್ಯಾಪಾರಿ ಸಾವಜಿ ಢೋಲಕಿಯ ಅವರು ತಮ್ಮ ಮಗನಾದ ದ್ರವ್ಯ ಢೋಲಕಿಯ (21)ರನ್ನು ತಿಂಗಳ ಸಂಬಳಕ್ಕೆ ದುಡಿಯಲು ಕಳುಹಿಸಿದ್ದಾರೆ.
ಅಮೆರಿಕದಲ್ಲಿ ಎಮ್​ಬಿಎ ವ್ಯಾಸಂಗ ಮಾಡುತ್ತಿರುವ ದ್ರವ್ಯ ಈಗ ರಜಾ ದಿನಗಳನ್ನು ಕಳೆಯಲು ಭಾರತಕ್ಕೆ ಬಂದಿದ್ದಾರೆ. ಆದರೆ ಅವರ ತಂದೆ ರಜಾ ಅವಧಿಯಲ್ಲಿ ಎಲ್ಲಿಯಾದರೂ ಕೆಲಸ ಮಾಡು ಅಂತ ಹೇಳಿ, ಮೂರು ಜತೆ ಬಟ್ಟೆ ಮತ್ತು ತುರ್ತು ಸಂದರ್ಭಕ್ಕಾಗಿ 7 ಸಾವಿರ ಹಣ ಕೈಯಲ್ಲಿಟ್ಟು ಕಳಿಸಿದ್ದಾರೆ.
ನಾನು ನನ್ನ ಪುತ್ರನಿಗೆ ಮೂರು ಷರತ್ತುಗಳನ್ನು ವಿಧಿಸಿದ್ದು, ಎಲ್ಲಿಯೂ ಸಹ ನನ್ನ ಹೆಸರು ಬಳಸದೆ, ಫೋನ್ ಕೂಡ ಬಳಕೆ ಮಾಡದೆ ಒಂದೇ ಜಾಗದಲ್ಲಿ ಒಂದು ವಾರಕ್ಕಿಂತ ಹೆಚ್ಚು ದಿನ ಇರದೆ ಬೇರೆ ಬೇರೆ ಕಡೆ ಒಂದು ತಿಂಗಳು ಕೆಲಸ ಮಾಡಿ ಸಂಬಳ ಪಡೆದು ಮರಳಬೇಕೆಂದು ಮಗನಿಗೂ ಸೂಚಿಸಿರುವುದಾಗಿ ಸಾವಜಿ ಢೋಲಕಿಯಾ ಅವರು ಹೇಳಿದ್ದಾರೆ.
ಸಾಮಾನ್ಯ ಜನರ ಕಷ್ಟ, ಬವಣೆ ಅರಿತು ಹಣದ ಮೌಲ್ಯದ ಬಗ್ಗೆ ತಿಳುವಳಿಕೆ ಬರಲಿ ಎಂದು ಈ ರೀತಿ ಮಾಡಿರುವುದಾಗಿ ಹರೆ ಕೃಷ್ಣ ವಜ್ರ ವ್ಯಾಪಾರ ಕಂಪನಿ ಮಾಲಿಕ ಸಾವಜಿ ಢೋಲಕಿಯ ತಿಳಿಸಿದ್ದಾರೆ.
ಮೊದಲ 6 ದಿನ ಕೆಲಸ ಸಿಗದೆ ಒದ್ದಾಡಿದ್ದ ದ್ರವ್ಯ ನಂತರ ಕಾಲ್ ಸೆಂಟರ್, ಶೂ ಮಾರ್ಟ್, ಮೆಕ್​ಡೊನಾಲ್ಡ್​ನಲ್ಲಿ ಕೆಲಸ ಮಾಡಿ ದಿನಕ್ಕೆ 250 ರುಪಾಯಿ ಬಾಡಿಗೆಯ ಲಾಡ್ಜ್​ನಲ್ಲಿ ನೆಲೆಸಿ ಊಟಕ್ಕೆ ಪರದಾಡಿ ಕಡೆಗೂ ಕಷ್ಟ ಅಂದರೆ ಏನೆಂದು ಅರಿತುಕೊಂಡು ಬಳಿಕ ಸೂರತ್​ನ ತನ್ನ ಮನೆಗೆ ವಾಪಸಾಗಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!