ಪ್ರಧಾನ ಮಂತ್ರಿ ನರೇಂದ್ರ ಮೋದಿ(ಸಂಗ್ರಹ ಚಿತ್ರ) 
ದೇಶ

ಸಮೃದ್ಧ ಹಾಗೂ ಆಧುನೀಕರಣ ಭಾರತ ನಿರ್ಮಾಣದಲ್ಲಿ ಶ್ರೀಗಳ ಪಾತ್ರ ಮುಖ್ಯವಾದದ್ದು:ಮೋದಿ

ಭಾರತವನ್ನು ಸಮೃದ್ಧ ಮತ್ತು ಆಧುನೀಕರಣಗೊಳಿಸಲು ಸ್ವಾಮೀಜಿಗಳು ಮತ್ತು ಧಾರ್ಮಿಕ ನಿಯಮಗಳು ಬಹದೊಡ್ಡ ಪಾತ್ರ ವಹಿಸಬಹುದು ಎಂದು...

ಗೋರಖ್ ಪುರ: ಭಾರತವನ್ನು ಸಮೃದ್ಧ ಮತ್ತು ಆಧುನೀಕರಣಗೊಳಿಸಲು ಸ್ವಾಮೀಜಿಗಳು ಮತ್ತು ಧಾರ್ಮಿಕ ನಿಯಮಗಳು ಬಹದೊಡ್ಡ ಪಾತ್ರ ವಹಿಸಬಹುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.ಅನೇಕ ಸ್ವಾಮೀಜಿಗಳು ಸಾರ್ವಜನಿಕ ಉಪಯೋಗದ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ನಮ್ಮ ದೇಶದಲ್ಲಿರುವ ಅನೇಕ ಸ್ವಾಮೀಜಿಗಳು, ಮಠಗಳು ಭಾರತವನ್ನು ಆಧುನೀಕರಣಗೊಳಿಸಿ ಸಮೃದ್ಧಗೊಳಿಸುವಲ್ಲಿ ಮತ್ತು ಜನರಲ್ಲಿ ಮೌಲ್ಯಯುತ ಸಂದೇಶಗಳನ್ನು ಬಿತ್ತುವಲ್ಲಿ ಪ್ರಮುಖ ಪಾತ್ರ ವಹಿಸುವುದು ಈ ಕಾಲದ ಅಗತ್ಯವಾಗಿದೆ. ಅನೇಕರು ಇದನ್ನು ಮಾಡುತ್ತಿದ್ದಾರೆ. ಇದು ದೇಶದ ಭವಿಷ್ಯದ ದೃಷ್ಟಿಯಿಂದ ಉತ್ತಮ ಎಂದು ಅವರು ನುಡಿದರು.
ಗೋರಕ್ ಪುರದ ಬಿಜೆಪಿ ಸಂಸದ ಹಾಗೂ ಹಿಂದುತ್ವ ನಾಯಕ ಯೋಗಿ ಆದಿತ್ಯನಾಥ್ ಅವರ ಗುರು ಮಹಾಂತ್ ಅವೈದ್ಯನಾಥ್ ಅವರ ಮೂರ್ತಿಯನ್ನು ಅನಾವರಣಗೊಳಿಸಿ ಮಾತನಾಡಿದರು.
ನಾಲ್ಕು ಬಾರಿ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದ ಅವೈದ್ಯನಾಥ್ ಅಯೋಧ್ಯ ರಾಮ ದೇವಾಲಯಕ್ಕೆ ಸಂಬಂಧಪಟ್ಟ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2014ರಲ್ಲಿ ಸಾವಿಗೀಡಾದ ಇವರ ಸ್ಮರಣಾರ್ಥ ಕಳೆದ ವರ್ಷ ಅವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಸರ್ಕಾರ ಅಂಚೆಚೀಟಿಯನ್ನು ಬಿಡುಗಡೆ ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!