ದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಇಂದು ಉತ್ತರ ಪ್ರದೇಶ ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿದ ಸೋನಿಯಾ ಗಾಂಧಿ. ಈ ಸಂದರ್ಭದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧ 
ದೇಶ

ಕಾಂಗ್ರೆಸ್ ನ ಗಿಮಿಕ್ ಉತ್ತರ ಪ್ರದೇಶದಲ್ಲಿ ಕೆಲಸ ಮಾಡುವುದಿಲ್ಲ: ಸಮಾಜವಾದಿ ಪಕ್ಷ

''27 ಸಾಲ್ ಯುಪಿ ಬೆಹಾಲ್'' ಎಂಬ ಘೋಷಣೆಯೊಂದಿಗೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಅಧಿಕೃತವಾಗಿ ಶನಿವಾರ ಚುನಾವಣಾ ಪ್ರಚಾರಕ್ಕೆ...

ನವದೆಹಲಿ: ''27 ಸಾಲ್ ಯುಪಿ ಬೆಹಾಲ್'' ಎಂಬ ಘೋಷಣೆಯೊಂದಿಗೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಅಧಿಕೃತವಾಗಿ ಶನಿವಾರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿರುವ ಕಾಂಗ್ರೆಸ್ ಬಗ್ಗೆ ಪ್ರತಿಕ್ರಿಯಿಸಿರುವ ಆಡಳಿತಾರೂಢ ಸಮಾಜವಾದಿ ಪಕ್ಷ, ಇಂತಹ ಗಿಮಿಕ್ ಗಳು ಕೆಲಸ ಮಾಡುವುದಿಲ್ಲ. ಕಳೆದ 60 ವರ್ಷಗಳಲ್ಲಿ ಅವರು ದೇಶಕ್ಕೆ ಏನು ಮಾಡಿದ್ದಾರೆ ಎಂದು ಮೊದಲು ದಾಖಲೆ ನೀಡಲಿ ಎಂದು ಸವಾಲೆಸೆದಿದೆ.
''ಕಾಂಗ್ರೆಸ್ ಪಕ್ಷ ಸುಮಾರು 60 ವರ್ಷ ಕೇಂದ್ರದಲ್ಲಿ ಅಧಿಕಾರ ನಡೆಸಿದೆ. ಆ ಸಮಯದಲ್ಲಿ ಅವರು ದೇಶವನ್ನು ಅಧೋಗತಿಯತ್ತ ಕೊಂಡೊಯ್ದರು. ಬೇರೆ ಪಕ್ಷಗಳಲ್ಲಿ ನೀವು ದೇಶಕ್ಕೆ ಏನು ಮಾಡಿದ್ದೀರಿ ಎಂದು ಲೆಕ್ಕ ಕೊಡಿ ಎಂದು ಕಾಂಗ್ರೆಸ್ ಕೇಳುತ್ತಿದೆ. ಆದರೆ ಅವರು 60 ವರ್ಷಗಳ ಕಾಲ ಅಧಿಕಾರದಲ್ಲಿದ್ದುಕೊಂಡು ದೇಶಕ್ಕೆ ಏನು ಮಾಡಿದರು ಎಂದು ಯಾವತ್ತೂ ಲೆಕ್ಕ ಕೊಡಲಿಲ್ಲ ಎಂದು ಸಮಾಜವಾದಿ ಪಕ್ಷದ ವಕ್ತಾರ ರಾಜೇಂದ್ರ ಚೌಧರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಆಳ್ವಿಕೆ ಸಂದರ್ಭದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿರಲಿಲ್ಲ. ಇದೀಗ ಬೇರೆ ಪಕ್ಷಗಳಿಂದ ವಿವರಣೆ ಕೇಳುತ್ತಾರೆ. ಕಾಂಗ್ರೆಸ್ ನ ಈ ಟ್ರಿಕ್ ಗಳು ಕೆಲಸ ಮಾಡುವುದಿಲ್ಲ. ಎಷ್ಟೇ ಪ್ರಚಾರ ನಡೆಸಿದರೂ ಕೂಡ ಉತ್ತರ ಪ್ರದೇಶದ ಜನರಿಗೆ ವಾಸ್ತವ ಗೊತ್ತಿದೆ. ಕಾಂಗ್ರೆಸ್ ನ ಕುತಂತ್ರದ ಬಲೆಗೆ ಜನರು ಬೀಳುವುದಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್