ನವದೆಹಲಿ: ಬಂಗಾಳಕೊಲ್ಲಿಯಲ್ಲಿ ನಿನ್ನೆ ಕಣ್ಮರೆಯಾಗಿರುವ ಭಾರತೀಯ ವಾಯುಪಡೆಯ ಎಎನ್-32 ಸರಕು ಸಾಗಣೆ ವಿಮಾನದಲ್ಲಿ ಕರ್ನಾಟಕದ ಬೆಳ್ತಂಗಡಿಯ ಸೇನಾಧಿಕಾರಿಯೊಬ್ಬರು ಸೇರಿದ್ದಾರೆ.
ಚೆನ್ನೈನ ತಾಂಬರಂ ವಾಯು ಸೇನೆ ನಿಲ್ದಾಣದಿಂದ ಪೋರ್ಟ್ ಬ್ಲೇರ್ ಗೆ ಪಯಣಿಸುತ್ತಿದ್ದ ವಿಮಾನದಲ್ಲಿ 29 ಮಂದಿ ಇದ್ದರು. ಇದರಲ್ಲಿ ಆರು ಮಂದಿ ವಿಮಾನ ಸಿಬ್ಬಂದಿ, 11 ವಾಯು ಪಡೆ ಸಿಬ್ಬಂದಿ, ಇಬ್ಬರು ಭೂ ಸೇನೆ ಯೋಧರು, ಒಬ್ಬ ಕರಾವಳಿ ರಕ್ಷಣಾ ಪಡೆಯ ನಾವಿಕ, ಓರ್ವ ನಾವಿಕ ಮತ್ತು ಎಂಟು ಮಂದಿ ನೌಕಾ ಪಡೆ ಸಿಬ್ಬಂದಿ ಇದ್ದರು ಎಂದು ವಾಯು ಪಡೆಯ ವಕ್ತಾರರು ಮಾಹಿತಿ ನೀಡಿದ್ದಾರೆ.
ಕಣ್ಮರೆಯಾಗಿರುವ ವಿಮಾನದಲ್ಲಿ ಬೆಳ್ತಂಗಡಿ ಗುರುವಾಯನಕೆರೆಯ ಭಾರತೀಯ ಸೇನೆಯ ಅಧಿಕಾರಿ ಏಕನಾಥ ಶೆಟ್ಟಿ ಸಹ ಇದ್ದರು. ಕಣ್ಮರೆಯಾಗಿರುವ ವಿಮಾನದ ಪತ್ತೆಗಾಗಿ ವಾಯುಪಡೆ, ನೌಕಾಪಡೆ, ಕರಾವಳಿ ರಕ್ಷಣಾ ಪಡೆಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.