ಸಾಂದರ್ಭಿಕ ಚಿತ್ರ 
ದೇಶ

ಮೂವರು ಚೀನಾ ಪತ್ರಕರ್ತರಿಗೆ ದೇಶ ತೊರೆಯಲು ಭಾರತ ಸೂಚನೆ

ಕ್ಸಿನುವಾ ನ್ಯೂಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿರುವ ಮೂವರು ಚೀನಾ ಪತ್ರಕರ್ತರನ್ನು ಈ ತಿಂಗಳಾಂತ್ಯಕ್ಕೆ ಭಾರತ...

ನವದೆಹಲಿ: ಕ್ಸಿನ್ಹುಆ ನ್ಯೂಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿರುವ ಮೂವರು ಚೀನಾ ಪತ್ರಕರ್ತರನ್ನು ಈ ತಿಂಗಳಾಂತ್ಯಕ್ಕೆ ಭಾರತ ಬಿಟ್ಟು ಹೋಗುವಂತೆ ಭಾರತ ಸೂಚಿಸಿದೆ. ಅವರ ವೀಸಾ ಅವಧಿಯನ್ನು ವಿಸ್ತರಿಸಲು ನಿರಾಕರಿಸಿದೆ. 
ವೀಸಾವನ್ನು ನವೀಕರಿಸಲು ನಿರಾಕರಿಸಿದ್ದಕ್ಕೆ ಕಾರಣ ಬಹಿರಂಗಪಡಿಸಲು ಭಾರತದ ಅಧಿಕಾರಿಗಳು ನಿರಾಕರಿಸಿದ್ದಾರೆ, ಆದರೆ ಕ್ಸಿನ್ಹುಆ ನ್ಯೂಸ್ ಏಜೆನ್ಸಿ ಅವರ ಬದಲಿಗೆ ಬೇರೆಯವರನ್ನು ಕಳುಹಿಸಬಹುದೆಂದು ಭಾರತ ಹೇಳಿದೆ.
ಮೂವರು ಚೀನಾ ಪತ್ರಕರ್ತರಿಗೆ ಜುಲೈ 31ರೊಳಗೆ ಭಾರತ ಬಿಟ್ಟು ಹೋಗುವಂತೆ ಆದೇಶ ನೀಡಲಾಗಿದೆ. ಈ ಪತ್ರಕರ್ತರು ಹಲವು ಬಾರಿ ವೀಸಾ ಅವಧಿಯನ್ನು ವಿಸ್ತರಿಸಿಕೊಂಡಿದ್ದು, ಅವರಲ್ಲೊಬ್ಬರು ಕಳೆದ ಏಳು ವರ್ಷಗಳಿಂದ ಭಾರತದಲ್ಲಿದ್ದಾರೆ. 
ಇತ್ತೀಚೆಗೆ ಈ ಮೂವರು ಪತ್ರಕರ್ತರು ಬೆಂಗಳೂರಿಗೆ ಬಂದು ಗಡೀಪಾರುಗೊಂಡ ಮೂವರು ಟಿಬೆಟಿಯನ್ ಕಾರ್ಯಕರ್ತರನ್ನು ಭೇಟಿ ಮಾಡಿದ್ದರು. ಅದು ಕೇಂದ್ರ ಸರ್ಕಾರಕ್ಕೆ ಒಂದು ವಿಷಯವಾಗಿತ್ತು ಎಂದು ಆಂಗ್ಲ ಪತ್ರಿಕೆಯೊಂದು ಇತ್ತೀಚೆಗೆ ವರದಿ ಮಾಡಿತ್ತು. ಕ್ಸಿನ್ಹುಆ ಪತ್ರಿಕೆ ಮತ್ತು ಚೀನಾ ವಿದೇಶಾಂಗ ಸಚಿವಾಲಯ ಈ ಬೆಳವಣಿಗೆ ಕುರಿತು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕ್ಸಿನ್ಹುಆ ಸುದ್ದಿ ಸಂಸ್ಥೆಯ ದೆಹಲಿ ಮತ್ತು ಮುಂಬೈಯಲ್ಲಿರುವ ಪತ್ರಕರ್ತರಾದ ವು ಕ್ವಿಯಾಂಗ್, ಲು ತಂಗ್ ಮತ್ತು ಶಿ ಯೊಂಗಂಗ್ ವೀಸಾ ಅವಧಿ ವಿಸ್ತರಣೆಯಿಂದ ತಿರಸ್ಕೃತಗೊಂಡವರು. ಇವರ ವೀಸಾ ವಿಸ್ತರಣೆ ಮಾಡಲು ಏನು ಕಾರಣ ಎಂಬುದನ್ನು ಭಾರತ ಸರ್ಕಾರ ತಿಳಿಸಿಲ್ಲ. ಆದರೆ ಇವರು ತಮ್ಮ ಪತ್ರಿಕೋದ್ಯಮ ಕಾರ್ಯವ್ಯಾಪ್ತಿಯನ್ನು ಮೀರಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!