ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ಕಿರಣ್ ರಿಜಿಜು(ಸಂಗ್ರಹ ಚಿತ್ರ) 
ದೇಶ

ಜಿಹಾದಿಗಳ ದಾಳಿ ಸಾಧ್ಯತೆ; ಈಶಾನ್ಯ ಭಾರತದ ರಾಜ್ಯಗಳಿಗೆ ಕೇಂದ್ರ ಮುನ್ನೆಚ್ಚರಿಕೆ

ಜಿಹಾದಿ ಕಾರ್ಯಕರ್ತರಿಂದ ಯಾವುದೇ ಬೆದರಿಕೆ ಬರುವ ಸಾಧ್ಯತೆಯಿರುವುದರಿಂದ ಅತ್ಯಂತ ಗರಿಷ್ಠ ಜಾಗ್ರತೆ...

ಗುವಾಹಟಿ: ಜಿಹಾದಿ ಕಾರ್ಯಕರ್ತರಿಂದ ಯಾವುದೇ ಬೆದರಿಕೆ ಬರುವ ಸಾಧ್ಯತೆಯಿರುವುದರಿಂದ ಅತ್ಯಂತ ಗರಿಷ್ಠ ಜಾಗ್ರತೆ ವಹಿಸುವಂತೆ ಈಶಾನ್ಯ ಭಾಗದ 8 ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ಮುನ್ನೆಚ್ಚರಿಕೆ ನೀಡಿದೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಜಿಹಾದಿ ಉಗ್ರರ ಯಾವುದೇ ಬೆದರಿಕೆಗಳನ್ನು ನಿಭಾಯಿಸಲು ಗರಿಷ್ಠ ಮುನ್ನೆಚ್ಚರಿಕೆ ವಹಿಸುವಂತೆ ಈಶಾನ್ಯ ಭಾಗಗಳ ರಾಜ್ಯಗಳನ್ನು ಕೇಂದ್ರ ಗೃಹ ಸಚಿವಾಲಯ ಹೇಳಿದೆ ಎಂದು ತ್ರಪುರಾ ಸರ್ಕಾರದ ಗೃಹ ಇಲಾಖೆ ತಿಳಿಸಿದೆ.
ಅಲ್ಲದೆ ವಿಶೇಷವಾಗಿ ಅಂತಾರಾಷ್ಟ್ರೀಯ ಗಡಿಗಳಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುವಂತೆ ಎಲ್ಲಾ ಕೇಂದ್ರ ಮತ್ತು ರಾಜ್ಯ ಜಾಗೃತ ದಳಗಳಿಗೆ ಗೃಹ ಸಚಿವಾಲಯ ಎಚ್ಚರಿಕೆ ನೀಡಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
 ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ಕಿರಣ್ ರಿಜಿಜು ನಿನ್ನೆ ಗುವಾಹಟಿಯಲ್ಲಿ ಮಾತನಾಡಿ, ಈಶಾನ್ಯ ಭಾರತಕ್ಕೆ ಮೂಲಭೂತವಾದಿಗಳ ಬೆದರಿಕೆ ಹೊಸದಲ್ಲ ಎಂದು ಹೇಳಿದರು.
ಈಶಾನ್ಯ ರಾಜ್ಯಗಳ ಶೇಕಡಾ 98 ಪ್ರದೇಶಗಳು ಅಂತಾರಾಷ್ಟ್ರೀಯ ಗಡಿಗಳಿಗೆ ಸೇರಿರುವುದರಿಂದ ಬೆದರಿಕೆಯ ಅಪಾಯ ಸಾಧ್ಯತೆಗಳು ತುಂಬಾ ಹೆಚ್ಚಾಗಿದೆ ಎಂದು ರಿಜಿಜು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಈಶಾನ್ಯ ಭಾರತದ 5 ಸಾವಿರದ 687 ಕಿಲೋ ಮೀಟರ್ ಗಳಲ್ಲಿ ಕೇವಲ 250 ಕಿಲೋ ಮೀಟರ್ ಹೊರಪರಿಧಿ ಮಾತ್ರ ಭಾರತವನ್ನು ಮುಟ್ಟುತ್ತದೆ. ಉಳಿದ 5 ಸಾವಿರದ 437 ಕಿಲೋ ಮೀಟರ್ ಅಂತಾರಾಷ್ಟ್ರೀಯ ಗಡಿಗಳು ಚೀನಾ, ಮಯನ್ಮಾರ್, ಬಾಂಗ್ಲಾದೇಶ, ಭೂತಾನ ಮತ್ತು ನೇಪಾಳವನ್ನು ತಾಗಿಕೊಂಡಿದೆ. 
ಇಸಿಸ್ ಆ ಭಾಗದ ಜನರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದೆ. ಉಗ್ರಗಾಮಿಗಳ ಬೆದರಿಕೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಎಲ್ಲಾ ಕ್ರಮ ತೆಗೆದುಕೊಳ್ಳಲಿದೆ.ಇತ್ತೀಚೆಗೆ ಢಾಕಾದ ಮೇಲೆ ಭಯೋತ್ಪಾದಕರ ದಾಳಿಯಾದ ನಂತರ ಈಶಾನ್ಯ ಭಾರತದಲ್ಲಿ ಅದರಲ್ಲೂ ಅಸ್ಸಾಂನಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲು ಅಲ್ಲಿನ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ ಎಂದು ಕಿರಣ್ ರಿಜಿಬು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!