ಪಿಎಸ್ಐ ಮೇಲೆ ಹಲ್ಲೆ 
ದೇಶ

ಪೊಲೀಸರ ಥಳಿತಕ್ಕೆ ಯುವಕ ಸಾವು: ಉದ್ರಿಕ್ತರಿಂದ ಪೊಲೀಸ್‌ಗೆ ಧರ್ಮದೇಟು

ವಿಚಾರಣೆ ನಿಮಿತ್ತ ಯುವಕನೊಬ್ಬನನ್ನು ಪೊಲೀಸ್ ಠಾಣೆಗೆ ಕರೆದ್ಯೊಯ್ದು ಥಳಿಸಿ ಆತನ ಸಾವಿಗೆ ಕಾರಣವಾಗಿದ್ದ ಪೊಲೀಸರ ವಿರುದ್ಧ ಯುವಕನ ಕಡೆಯವರು ಧರ್ಮದೇಟು...

ಸೂರತ್: ವಿಚಾರಣೆ ನಿಮಿತ್ತ ಯುವಕನೊಬ್ಬನನ್ನು ಪೊಲೀಸ್ ಠಾಣೆಗೆ ಕರೆದ್ಯೊಯ್ದು ಥಳಿಸಿ ಆತನ ಸಾವಿಗೆ ಕಾರಣವಾಗಿದ್ದ ಪೊಲೀಸರ ವಿರುದ್ಧ ಯುವಕನ ಕಡೆಯವರು ಸಾರ್ವಜನಿಕವಾಗಿ ಧರ್ಮದೇಟು ನೀಡಿರುವ ಘಟನೆ ಸೂರತ್ ನಲ್ಲಿ ವರದಿಯಾಗಿದೆ.

ಘಟನೆ ಕುರಿತಂತೆ ಯುವಕನ ಕಡೆಯವರೊಂದಿಗೆ ಚೋಕ್ ಬಜಾರ್ ಠಾಣೆ ಪಿಎಸ್ಐ ವಿಎಸ್ ಪಟೇಲ್ ಚರ್ಚಿಸುತ್ತಿದ್ದಾಗ ಉದ್ರಿಕ್ತ ಗುಂಪು ಏಕಾಏಕಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಸುಮಾರು 30-50 ಜನರಿಂದ ತಂಡ ಪಿಎಸ್ಐ ಅವರನ್ನು ಅಟ್ಟಾಡಿಸಿ ಹೊಡೆದಿದ್ದಾರೆ. ಸದ್ಯ ಗಾಯಗೊಂಡಿರುವ ಪಟೇಲ್ ಅವರನ್ನು ಸೂರತ್ ನ ಸ್ಮಿಮೆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜೂಜಾಡುತ್ತಿದ್ದ ಆರೋಪದ ಮೇಲೆ ಕುಡಿದು ಚಿತ್ತಾಗಿದ್ದ ಯುವಕನೊಬ್ಬನನ್ನು ಪೊಲೀಸರು ಠಾಣೆಗೆ ಕರೆದ್ಯೊಯ್ದು ಥಳಿಸಿದ್ದಾರೆ. ಕಂಠ ಪೂರ್ತಿ ಕುಡಿದಿದ್ದ 25 ವರ್ಷದ ಮಹೇಂದರ್ ಮಕ್ವಾನಾ ಒಂದೇ ಏಟಿಗೆ ಮೃತಪಟ್ಟಿದ್ದು, ಇದರಿಂದ ಕೋಪಗೊಂಡ ಯುವಕನ ಕಡೆಯವರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಭಾರತದಲ್ಲಿ ಫುಡ್‌ ಕಂಪನಿಗಳ ಲಾಬಿ: ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಮೇಲೆ ‘ರೆಡ್‌ ಅಲರ್ಟ್’ ಪ್ರಸ್ತಾವ ಕೈಬಿಟ್ಟ FSSAI, ಆಗಿದ್ದೇನು?

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!