ನವದೆಹಲಿ: ಸಂಸತಿನಲ್ಲಿ ರಹಸ್ಯ ಕ್ಯಾಮೆರಾ ಮೂಲಕ ಚಿತ್ರೀಕರಣ ಮಾಡಿ ಅದನ್ನು ಸಾಮಾಜಿಕ ಜಾಲ ತಾಣದಲ್ಲಿ ಅಪ್‍ಲೋಡ್ ಮಾಡಿದ್ದ ಆರೋಪ ಎದುರಿಸುತ್ತಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ಭಗವಂತ್ ಮಾನ್ ಅವರ ವಿಚಾರಣೆ ನಡೆಸಲು ಸ್ಪೀಕರ್ ಸುಮಿತ್ರಾ ಮಹಾಜನ್ ಅವರು 9 ಸದಸ್ಯರ ಸಮಿತಿಯೊಂದನ್ನು ರಚಿಸಿದ್ದಾರೆ.
ಬಿಜೆಪಿ ಸಂಸದ ಕಿರೀಟ್ ಸೋಮಯ್ಯ ಈ ಸಮಿತಿಯ ಅಧ್ಯಕ್ಷರಾಗಿದ್ದು, ಮೀನಾಕ್ಷಿ ಲೇಖಿ, ಸತ್ಯಪಾಲ್ ಸಿಂಗ್, ಅನಂದ್ ರಾವ್ ಅದ್ಸೂಲ್, ಬಿ ಮತಾಬ್, ರತ್ನ ದೇ ನಾಗ್, ಕೆ.ಸಿ ವೇಣು ಗೋಪಾಲ್. ಸೇರಿದಂತೆ 9 ಮಂದಿಯ ಸದಸ್ಯರ ಸಮಿತಿ ರಚಿಸಲಾಗಿದೆ. ಆಗಸ್ಟ್ 3ರೊಳಗೆ ವರದಿ ನೀಡುವಂತೆ ಸಮಿತಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜುಲೈ 26 ರಂದು ಬೆಳಗ್ಗೆ 10.30 ರೊಳಗೆ ಸಮಿತಿಯ ಮುಂದೆ ಹೇಳಿಕೆ ದಾಖಲಿಸುವಂತೆ ಭಗವಾನ್ ಮಾನ್ ಅವರಿಗೆ ಸೂಚಿಸಲಾಗಿದೆ. ಸಮಿತಿ ವರದಿ ಸಲ್ಲಿಸಿ ಪ್ರಕರಣದ ಬಗ್ಗೆ ತೀರ್ಮಾನವಾಗುವವರೆಗೂ ಬಂದು ತೀರ್ಮಾನವಾಗುವವರೆಗೆ ಲೋಕಸಭೆಯನ್ನು ಪ್ರವೇಶಿಸದಂತೆ ಮಾನ್‍ಗೆ ಲೋಕಸಭಾಧ್ಯಕ್ಷರು ಸೂಚಿಸಿದ್ದಾರೆ.