ಅಬ್ದುಲ್ ಕಲಾಂ 
ದೇಶ

ಅಬ್ದುಲ್ ಕಲಾಂ ಪ್ರತಿಮೆ ನಿರ್ಮಾಣಕ್ಕೆ ಇಸ್ಲಾಮಿಕ್ ಸಂಘಟನೆಯಿಂದ ವಿರೋಧ

ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಸಮಾಧಿ ಬಳಿ ಡಾ.ಕಲಾಂ ಅವರ ಪ್ರತಿಮೆಯನ್ನು ನಿರ್ಮಿಸಲು ಇಸ್ಲಾಮಿಕ್ ಸಂಘಟನೆಯೊಂದು ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.

ರಾಮೇಶ್ವರಂ: ಈ ವರದಿ ನಿಮಗೆ ಅಚ್ಚರಿ ಎಣಿಸಬಹುದು ಆದರೆ ಸತ್ಯ, ವಿಷಯವೇನೆಂದರೆ ರಾಮೇಶ್ವರಂ ನ  ಪೇಯ್ ಕರಂಬು ಬಳಿ ಇರುವ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಸಮಾಧಿ ಬಳಿ ಡಾ.ಕಲಾಂ ಅವರ ಪ್ರತಿಮೆಯನ್ನು ನಿರ್ಮಿಸಲು ಇಸ್ಲಾಮಿಕ್ ಸಂಘಟನೆಯೊಂದು ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.

ಹಿಂದು ಪತ್ರಿಕೆಯಲ್ಲಿ ಪ್ರಕಟವಾದ ವರದಿಯುಯ ಪ್ರಕಾರ ರಾಮನಾಥಪುರಂ ಜಿಲ್ಲೆಯ ಜಮಾತ್-ಉಲ್- ಉಲಾಮಾ ಪರಿಷತ್ ಅಬ್ದುಲ್ ಕಲಾಂ ಅವರ ಪುತ್ಥಳಿ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು,  ಪ್ರತಿಮೆ ನಿರ್ಮಾಣ ಮುಸ್ಲಿಮರ ವೈಯಕ್ತಿಕ ಕಾನೂನು ಷರಿಯಾಗೆ ವಿರೋಧವಾಗಿದೆ ಎಂದು ವಾದಿಸುತ್ತಿದೆ.

ಇಸ್ಲಾಮ್ ನಲ್ಲಿ ಮೂರ್ತಿ ಪೂಜೆ, ವ್ಯಕ್ತಿ ಪೂಜೆಗೆ ವಿರೋಧವಿದೆ ಎಂದು ಜಮಾತ್-ಉಲ್- ಉಲಾಮಾ ಸಂಘಟನೆ ಅಧ್ಯಕ್ಷರು ತಿಳಿಸಿದ್ದಾರೆ. ಅಬ್ದುಲ್ ಕಲಾಂ ಅವರ ಆದರ್ಶಗಳನ್ನು ಪಾಲಿಸಿ, ಭಾರತದ ಅಭಿವೃದ್ಧಿಗೆ ಅವರು ಕಂಡಿದ್ದ ಕನಸನ್ನು ನನಸು ಮಾಡುವುದೇ ನಾವು ಅವರಿಗೆ ಸೂಚಿಸುವ ಗೌರವ ಎಂದು ಜಮಾತ್-ಉಲ್- ಉಲಾಮಾ ಸಂಘಟನೆ ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT