ಶ್ರೀನಗರ: ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಸಮೀಪ ನೌಗಮ್ ವಲಯದಲ್ಲಿ ಮಂಗಳವಾರ ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ.
ಭದ್ರತಾ ಪಡೆಗಳು ಮತ್ತು ಉಗ್ರಗಾಮಿಗಳ ಮಧ್ಯೆ ಇಂದು ಬೆಳಗ್ಗೆ ತೀವ್ರವಾದ ಗುಂಡಿನ ಚಕಮಕಿ ನಡೆಯಿತು. ನಾಲ್ಕು ಮಂದಿ ಉಗ್ರರು ಹತರಾಗಿ ಒಬ್ಬನನ್ನು ಸೆರೆಹಿಡಿಯಲಾಗಿದೆ. ಇವರೆಲ್ಲರೂ ವಿದೇಶಿಯರು ಎಂದು ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ವರದಿ ಬರುವ ಹೊತ್ತಿಗೆ ಗುಂಡಿನ ದಾಳಿ ಇನ್ನೂ ಮುಂದುವರಿದಿತ್ತು. ಕಾರ್ಯಾಚರಣೆ ಇನ್ನೂ ಮುಂದುವರಿದಿರುವುದರಿಂದ ಇದು ಒಳನುಸುಳುವಿಕೆ ಕಾರ್ಯಾಚರಣೆಯೇ ಎಂದು ಈಗಲೇ ಹೇಳುವುದು ಅಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಬ್ಬ ಉಗ್ರಗಾಮಿಯನ್ನು ಬಂಧಿಸಿರುವುದರಿಂದ ಆತನಿಂದ ಕೆಲವು ಮಹತ್ವದ ಮಾಹಿತಿಗಳು ಸಿಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.