ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 2007ರ ನವೆಂಬರ್ 11ರಂದು ಮಾಸ್ಕೊಗೆ ಭೇಟಿ ನೀಡಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ಒನ್ ವಿಮಾನ, ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿತ್ತು ಎಂಬ ಅಂಶ ತಡವಾಗಿ ಬೆಳಕಿಗೆ ಬಂದಿದೆ.
ರಷ್ಯಾದ ಮಾಸ್ಕೊ ವಿಮಾನ ನಿಲ್ದಾಣದಲ್ಲಿ ಇನ್ನೇನು ವಿಮಾನ ಇಳಿಯಬೇಕು ಎನ್ನುವಷ್ಟರಲ್ಲಿ, ವಿಮಾನದ ಲ್ಯಾಂಡಿಂಗ್ ಕೇರ್ ಕೆಳಕ್ಕೆ ಬರಲಿಲ್ಲ. ವಿಮಾನದ ಚಕ್ರ ಕೆಳಕ್ಕೆ ಬಂದಿಲ್ಲ ಎಂದು ಮಾಸ್ಕೊ ಎಟಿಸಿ ಸಿಬ್ಬಂದಿ ಕಾಕ್ಪಿಟ್‍ನಲ್ಲಿ ಎಚ್ಚರಿಕೆ ದೀಪ ಆನ್ ಮಾಡಿದಾಗ 747 ಬೋಯಿಂಗ್ ಸಿಬ್ಬಂದಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದರು ತಿಳಿದು ಬಂದಿದೆ.
ವಿವಿಐಪಿ ವಿಮಾನದಲ್ಲಿ ಸುರಕ್ಷತಾ ವಿಧಾನವನ್ನು ಉಲ್ಲಂಘಿಸಲಾಗಿತ್ತೇ ಎಂಬ ಬಗ್ಗೆ ಹಲವು ಮಂದಿ ವಿಮಾನ ತಂತ್ರಜ್ಞರನ್ನು ಸಂಪರ್ಕಿಸಲಾಯಿತು. ಈ ದೋಷ ಸರಿಪಡಿಸುವ ಮುನ್ನ ತೀರಾ ಕೆಳಗೆ ಇದು ಹಾರುತ್ತಿತ್ತು. ಇದೇ ವೇಳೆ ಮಾಸ್ಕೊ ಎಟಿಸಿ, ಕಾಕ್ಪಿಟ್ ನಲ್ಲಿ ಎಚ್ಚರಿಕೆ ಸಂದೇಶವನ್ನು ನೀಡಿತ್ತು. ಇದರಿಂದ ಎಚ್ಚೆತ್ತುಕೊಂಡ ಸಿಬ್ಬಂದಿ ಅಪಾಯದಿಂದ ಪಾರು ಮಾಡಿದರು ಎಂದು ಹೇಳಿದ್ದಾರೆ.