ದೇಶ

ಶ್ರಮಜೀವಿ ಎಕ್ಸ್ ಪ್ರೆಸ್ ಸ್ಫೋಟ ಪ್ರಕರಣ: ಬಾಂಗ್ಲಾದೇಶದ ಓರ್ವ ಅಪರಾಧಿಗೆ ಗಲ್ಲು ಶಿಕ್ಷೆ

Srinivas Rao BV
ಲಖನೌ: 2005 ರಲ್ಲಿ ನಡೆದಿದ್ದ ಶ್ರಮಜೀವಿ ಎಕ್ಸ್ ಪ್ರೆಸ್ ಸ್ಫೋಟ ಪ್ರಕರಣದ ಅಪರಾಧಿ, ಬಾಂಗ್ಲಾದೇಶದ ಮೂಲದ ವ್ಯಕ್ತಿಗೆ ಉತ್ತರ ಪ್ರದೇಶ ಜೌನ್ ಪುರ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. 
ಮೊಹಮ್ಮದ್ ಅಲಾಮ್ಗಿರ್ ಅಕಾ ರೋನ್ನಿ ಎಂಬ ವ್ಯಕ್ತಿಯನ್ನು ಶ್ರಮಜೀವಿ ಎಕ್ಸ್ ರ್ಪೆಸ್ ಸ್ಫೋಟ ಪ್ರಕರಣ ಅಪರಾಧಿ ಎಂದು ಘೋಷಿಸಿದ್ದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಬುಧಿರಾಮ್ ಯಾದವ್ ಗಲ್ಲು ಶಿಕ್ಷೆಯನ್ನು ಪ್ರಕಟಿಸಿದ್ದಾರೆ, ಪ್ರಕರಣದ ಮತ್ತೋರ್ವ ಆರೋಪಿ ಉಬಿದ್-ಉರ್-ರೆಹಮಾನ್ ಗೆ ಆಗಸ್ಟ್ 2ರಂದು ಶಿಕ್ಷೆಯನ್ನು ಪ್ರಕಟಿಸಲಾಗುತ್ತದೆ. 
ಭಾರತೀಯ ದಂಡ ಸಂಹಿತೆ ಪ್ರಕಾರ ರೋನ್ನಿಗೆ ಹತ್ಯೆ, ಕೊಲೆ ಯತ್ನ, ರೈಲ್ವೆ ಕಾಯ್ದೆಯಡಿ ಸ್ಫೋಟಕ ವಸ್ತುಗಳನ್ನು ಹೊಂದಿದ್ದ ಆರೋಪದಡಿ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಶ್ರಮ ಜೀವಿ ಎಕ್ಸ್ ಪ್ರೆಸ್ ಸ್ಫೋಟ ಪ್ರಕರಣದಲ್ಲಿ 53 ಸಾಕ್ಷಿಗಳ ವಿಚಾರಣೆ ನಡೆದೆದೆ. ದೆಹಲಿಯಿಂದ ಪಾಟ್ನಾಗೆ ತೆರಳುತ್ತಿದ್ದ ಶ್ರಮಜೀವಿ ಎಕ್ಸ್ ಪ್ರೆಸ್ ರೈಲಿನಲ್ಲಿ ಲಖನೌ- ವಾರಾಣಸಿ ಮಾರ್ಗದಲ್ಲಿ 2005 ರ ಜು.28 ರಂದು ಸ್ಫೋಟ ಸಂಭವಿಸಿ 60 ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದರು. 
SCROLL FOR NEXT