ನವದೆಹಲಿ: ಅಂತರ್ಜಾಲ ಸರ್ಚ್ ದೈತ್ಯ ಗೂಗಲ್ ಭಾರತದ ಖ್ಯಾತ ಲೇಖಕ ಮುನ್ಷಿ ಪ್ರೇಮ್ ಚಂದ್ ಹುಟ್ಟುಹಬ್ಬಕ್ಕೆ ಡೂಡಲ್ ಬಿಡಿಸುವ ಮೂಲಕ ಗೌರವ ಸಲ್ಲಿಸಿದೆ.
1880ರ ಜುಲೈ 31ರಂದು ವಾರಣಾಸಿಯ ಲಮ್ಹಿ ಗ್ರಾಮದಲ್ಲಿ ಜನಿಸಿದ್ದ ಪ್ರೇಮ್ ಚಂದ್ 12ಕ್ಕೂ ಹೆಚ್ಚು ಕಾದಂಬರಿ ರಚಿಸಿದ್ದಾರೆ. ಇನ್ನು 290 ಸಣ್ಣಕಥೆ ಜತೆಗೆ ಅಸಂಖ್ಯಾತ ಪ್ರಬಂಧಗಳ ರಚನೆ ಮಾಡಿದ್ದಾರೆ.
ಶಿಕ್ಷಕರಾಗಿದ್ದ ಪ್ರೇಮ್ ಚಂದ್ 1920ರಲ್ಲಿ ಮಹಾತ್ಮಾ ಗಾಂಧಿಜೀ ಅವರ ಅಸಹಕಾರ ಚಳುವಳಿಗೆ ಧುಮುಕ್ಕಿದ್ದರು. ಗಾಂಧಿ ತತ್ವದಿಂದ ಪ್ರೇರಣೆ ಪಡೆದ ಮುನ್ಷಿ ಸಾಮಾಜಿಕ ಕಳಕಳಿ ಮತ್ತು ಸ್ವಾತಂತ್ರ್ಯ ಪೂರ್ವ ಲೇಖಗಳನ್ನು ಪ್ರಕಟಿಸಿದ್ದಾರೆ.
ಬಡೆ ಭೈಸಾಬ್, ಗಬನ್, ಪೂಸ್ ಕಿ ರಾತ್ ಮತ್ತು ಇಗ್ದಾ ಪ್ರೇಮ್ ಚಂದ್ರ ಪ್ರಮುಖ ಕಾದಂಬರಿಗಳು.