ದೇಶ

ಹೈಕೋರ್ಟ್ ನ್ಯಾಯಮೂರ್ತಿಗೆ 25 ಲಕ್ಷ ರು. ಆಮೀಷ: ಬಹಿರಂಗ ಪಡಿಸಿದ ಜಡ್ಜ್

Shilpa D

ಕೊಚ್ಚಿ; ಚಿನ್ನ ಕಳ್ಳ ಸಾಗಣೆ ಜಾಲಕ್ಕೆ ಸಂಬಂಧಪಟ್ಟ ಪ್ರಕರಣವೊಂದರಲ್ಲಿ ತಮ್ಮ ಪರವಾಗಿ ತೀರ್ಪು ನೀಡುವಂತೆ ಕೇರಳ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ 25 ಲಕ್ಷ ರು.ಆಮೀಷ ಒಡ್ಡಿದ ಪ್ರಕರಣ ಬೆಳಕಿಗೆ ಬಂದಿದೆ.

ಚಿನ್ನ ಕಳ್ಳ ಸಾಗಣೆ ಜಾಲಕ್ಕೆ ಸಂಬಂಧಪಟ್ಟ ಕಾಫಿಪೋಸಾ ಪ್ರಕರಣ ಒಂದರಲ್ಲಿ ಆರೋಪಿಯೊಬ್ಬರು 25 ಲಕ್ಷ ರೂಪಾಯಿಗಳ ಆಮಿಷ ಒಡ್ಡಿದ್ದರು. ಈ ಘಟನೆಯ ಹಿನ್ನೆಲೆಯಲ್ಲಿ ಆ ನ್ಯಾಯಮೂರ್ತಿಯವರನ್ನು ಒಳಗೊಂಡ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದೆ.

ನ್ಯಾಯಾಲಯದಲ್ಲಿ ಪ್ರಕರಣ ಸೋಮವಾರ ವಿಚಾರಣೆಗೆ ಬಂದಾಗ ನ್ಯಾಯಮೂರ್ತಿ ಕೆ.ಟಿ. ಶಂಕರನ್ ಅವರು ‘ಕಾಫಿಪೋಸಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯು ತಮಗೆ 25 ಲಕ್ಷ ರೂಪಾಯಿಗಳ ಲಂಚದ ಆಮಿಷ ಒಡ್ಡಿರುವುದಾಗಿ ನ್ಯಾಯಾಲಯದ ಸಭಾಂಗಣದಲ್ಲೇ ಬಹಿರಂಗ ಪಡಿಸಿದರು.

ಲಂಚದ ಆಮಿಷ ವಿಚಾರ ಬಹಿರಂಗಗೊಳ್ಳುತ್ತಿದ್ದಂತೆಯೇ ನ್ಯಾಯಮೂರ್ತಿ ಶಂಕರನ್ ಮತ್ತು ನ್ಯಾಯಮೂರ್ತಿ ಎ. ಹರಿಪ್ರಸಾದ್ ಅವರನ್ನು ಒಳಗೊಂಡ ಪೀಠವು ‘ನಮ್ಮ ಮಿತಿ ಮೀರಿದ ಕಾರಣಗಳಿಗಾಗಿ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ಪ್ರಕಟಿಸಿದರು.

ಪ್ರಮುಖ ಚಿನ್ನ ಸಾಗಣೆ ಪ್ರಕರಣದಲ್ಲಿ ಎಂಟು ಮಂದಿ ಆರೋಪಿಗಳನ್ನು ಮುಂಜಾಗರೂಕತಾ ಬಂಧಕ್ಕೆ ಒಳಪಡಿಸಿರುವುದಾಗಿ ಕಾಫಿಪೋಸಾ ಸಲಹಾ ಮಂಡಳಿಯು ಈ ವರ್ಷ ಜನವರಿಯಲ್ಲಿ ದೃಢಪಡಿಸಿತ್ತು.

SCROLL FOR NEXT