ಸುಬ್ರಹ್ಮಣಿಯನ್ ಸ್ವಾಮಿ 
ದೇಶ

ಆಮ್ ಆದ್ಮಿ ಪಕ್ಷ ಉಡ್ತಾ ಪಂಜಾಬ್ ಚಿತ್ರದ ಮೂಲಕ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ: ಸುಬ್ರಹ್ಮಣಿಯನ್ ಸ್ವಾಮಿ

ಉಡ್ತಾ ಪಂಜಾಬ್ ಚಿತ್ರ ಬಿಡುಗಡೆ ಮಾಡುತ್ತಿರುವ ಸಂದರ್ಭದ ಬಗ್ಗೆ ಪ್ರಶ್ನೆ ಮಾಡಿರುವ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ, ಆಮ್ ಆದ್ಮಿ ಪಕ್ಷ ಉಡ್ತಾ ಪಂಜಾಬ್ ಚಿತ್ರವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ

ನವದೆಹಲಿ: ಉಡ್ತಾ ಪಂಜಾಬ್ ಚಿತ್ರ ಬಿಡುಗಡೆ ಮಾಡುತ್ತಿರುವ ಸಂದರ್ಭದ ಬಗ್ಗೆ ಪ್ರಶ್ನೆ ಮಾಡಿರುವ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ, ಆಮ್ ಆದ್ಮಿ ಪಕ್ಷ ಉಡ್ತಾ ಪಂಜಾಬ್ ಚಿತ್ರವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಪಂಜಾಬ್ ವಿಧಾನಸಭಾ ಚುನಾವಣೆ ಸಧ್ಯದಲ್ಲೇ ನಡೆಯಲಿದ್ದು ರಾಜಕೀಯ ಲಾಭಕ್ಕಾಗಿ ಉಡ್ತಾ ಪಂಜಾಬ್ ಚಿತ್ರವನ್ನು ಬಳಸಿಕೊಳ್ಳುತ್ತಿದೆ ಎಂದು ಸ್ವಾಮಿ ಆರೋಪಿಸಿದ್ದಾರೆ. ಪಂಜಾಬ್ ನ್ನು ಕೆಟ್ಟದಾಗಿ ಬಿಂಬಿಸಲು ಚಿತ್ರದ ಸಹ ನಿರ್ಮಾಪಕ ಅನುರಾಗ್ ಕಶ್ಯಪ್ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಂದ ಹಣ ಪಡೆದಿದ್ದಾರೆ ಎಂದು ಸೆನ್ಸಾರ್ ಮಂಡಳಿ ಮುಖ್ಯಸ್ಥ ಪಹ್ಲಾಜ್ ನಿಹ್ಲಾನಿ ಅವರು ಆರೋಪ ಮಾಡಿದ ಬೆನ್ನಲ್ಲೇ ಸುಬ್ರಹ್ಮಣಿಯನ್ ಸ್ವಾಮಿ ಈ ಹೇಳಿಕೆ ನೀಡಿದ್ದಾರೆ.
ಉಡ್ತಾ ಪಂಜಾಬ್ ಚಿತ್ರ ಬಿಡುಗಡೆಯಾಗುತ್ತಿರುವ ಸಂದರ್ಭದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸುಬ್ರಹ್ಮಣಿಯನ್ ಸ್ವಾಮಿ, ಪಂಜಾಬ್ ನಲ್ಲಿ ಡ್ರಗ್ ಸಮಸ್ಯೆ ಇರುವುದಕ್ಕೆ ಅಲ್ಲಿನ ಸರ್ಕಾರವನ್ನು ಹೊಣೆ ಮಾಡುವಂತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಡ್ರಗ್ ಬಹುದೊಡ್ಡ ಸಮಸ್ಯೆ ಎಂಬುದರ ಬಗ್ಗೆ ಯಾರಿಗೂ ಅನುಮಾನವಿಲ್ಲ. ಆದರೆ ಅದು ಅಕಾಲಿಗಳಿಂದ ಪ್ರಾರಂಭವಾಯಿತು ಎಂದು ಹೇಳಲು ಪ್ರಾರಂಭವಾಗಿದ್ದು ಕಾಂಗ್ರೆಸ್ ನಿಂದ ಎಂದು ಸುಬ್ರಹ್ಮಣಿಯನ್ ಸ್ವಾಮಿ ಆರೋಪಿಸಿದ್ದಾರೆ. ಪಂಜಾಬ್ ಚುನಾವಣೆಯ ನಂತರ ಈ ಚಿತ್ರ ಬಿಡುಗಡೆಯಾದರೆ ಯಾವ ಸಮಸ್ಯೆಯೂ ಇಲ್ಲ ಎಂದು ಸ್ವಾಮಿ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಶನ್: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪೆನ್ ಡ್ರೈವ್ ಸಲ್ಲಿಕೆ; ನ್ಯಾಯಾಂಗ ತನಿಖೆಗೆ ಆಗ್ರಹ!

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

Batman masks, offline maps: ನಟಿ ರಿಚಾ ಚಡ್ಡಾ ಐಡಿಯಾ ಫಾಲೋ ಮಾಡ್ತಿರುವ ಯುವಕರು; Facial recognition camera ಫುಲ್ ಕನ್‌ಫ್ಯೂಸ್, ದೆಹಲಿ ಪೊಲೀಸರು ತಬ್ಬಿಬ್ಬು..!

ಪಂಜಾಬ್: ಫೇಸ್‌ಬುಕ್ ಲೈವ್‌ನಲ್ಲಿರುವಾಗಲೇ ಮಾದಕವಸ್ತು ವಿರೋಧಿ ಹೋರಾಟಗಾರ ಪರ್ವಿಂದರ್ ಸಿಂಗ್ ಜೋತಾ ಗುಂಡೇಟಿಗೆ ಬಲಿ!