ಸಾಂದರ್ಭಿಕ ಚಿತ್ರ 
ದೇಶ

ವಿವಾಹಾಕಾಂಕ್ಷಿಗೆ ಹೆಣ್ಣು ತೋರಿಸಿ, ಬ್ಲ್ಯಾಕ್ ಮೇಲ್ ಮಾಡಿ ದೋಚುತ್ತಿದ್ದ ಗ್ಯಾಂಗ್ ಆರೆಸ್ಟ್

2ನೇ ಮದುವೆಗಾಗಿ ಹೆಣ್ಣು ಹುಡುಕುತ್ತಿದ್ದ ವ್ಯಕ್ತಿಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷನನ್ನು ಪೊಲೀಸರು...

ಅಹಮದಾಬಾದ್: 2ನೇ ಮದುವೆಗಾಗಿ ಹೆಣ್ಣು ಹುಡುಕುತ್ತಿದ್ದ ವ್ಯಕ್ತಿಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷನನ್ನು ಪೊಲೀಸರು ಬಂಧಿಸಿದ್ದಾರೆ.

ಪರ್‌ಸೊತಮ್ ಮಾರ್ವಿಯಾ ಅವರ ಪತ್ನಿ ಮೂರುವರೆ ವರ್ಷದ ಹಿಂದೆ ತೀರಿಕೊಂಡಿದ್ದರು, ಕುಟುಂಬದವರು ಅವರಿಗೆ ಇತ್ತೀಚೆಗೆ ಮರು ಮದುವೆ ಮಾಡಲು ನಿರ್ಧರಿಸಿದ್ದರು. ವಿಷಯ ತಿಳಿದ ಶೀಲಾ ಕ್ರಿಶ್ಚಿಯನ್ ಎಂಬಾಕೆ ಕರೆ ಮಾಡಿ ಹುಡುಗಿ ತೋರಿಸುವುದಾಗಿ ಅಹಮದಾಬಾದ್‌ಗೆ ಕರೆಸಿದ್ದರು. ಮತ್ತೊಮ್ಮೆ ನಗರಕ್ಕೆ ಕರೆಸಿಕೊಂಡು ಮಂಜುಳಾ ಎಂಬಾಕೆ ಸೇರಿದಂತೆ ಹಲವು ಹುಡುಗಿಯರನ್ನು ತೋರಿಸಿದರು. ಆದರೆ ಪರ್‌ಸೊತಮ್ ಮಾರ್ವಿಯಾ ನಿರಾಕರಿಸಿದ್ದರು.

ಕೆಲವು ದಿನದ ಬಳಿಕ ಮಂಜುಳಾ ಕರೆ ಮಾಡಿ, 'ನಿಮ್ಮನ್ನೇ ಮದುವೆಯಾಗುತ್ತೇನೆ, ನೀವು ಒಪ್ಪದಿದ್ದರೆ ನಿಮ್ಮ ಹೆಸರು ಬರೆದಿಟ್ಟು ಸಾಯುವೆ,' ಎಂದು ಬೆದರಿಸಿದ್ದಳು. ಹೆದರಿದ ಪರ್‌ಸೊತಮ್ ಮಾರ್ವಿಯಾ ಅಹಮದಾಬಾದ್‌ಗೆ ಹೋಗಿ ಆಕೆಯನ್ನು ಭೇಟಿಯಾಗಿದ್ದರು. ಬಳಿಕ ಆಕೆ ಮತ್ತೊಂದು ಹುಡುಗಿಯೊಂದಿಗೆ ಮಾರ್ವಿಯಾ ಜತೆ ಮೌಂಟ್‌ ಅಬುವಿಗೆ ಹೋದಳು. .ಪರ್‌ಸೊತಮ್ ಮಾರ್ವಿಯಾ ಅವರನ್ನು ಮೌಂಟ್‌ ಅಬುವಿಗೆ ಕರೆದೊಯ್ದು ಅಲ್ಲಿನ ವಸತಿಗೃಹದಲ್ಲಿ ಮತ್ತು ಬರುವ ಪಾನೀಯ ನೀಡಿ ಅಸಭ್ಯ ಭಂಗಿಗಳಲ್ಲಿ ಪೋಟೊ ತೆಗೆಯಲಾಗಿತ್ತು. ಅವರಲ್ಲಿದ್ದ ಚಿನ್ನಾಭರಣ, ನಗದನ್ನು ದೋಚಲಾಗಿತ್ತು. ನಂತರ ಆ ಪೋಟೊಗಳನ್ನು ಮುಂದಿಟ್ಟು 5 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಲಾಗುತ್ತಿತ್ತು.

ಈ ಬೆನ್ನಲ್ಲೆ ಮತ್ತೊಬ್ಬ ವ್ಯಕ್ತಿ ಕರೆ ಮಾಡಿ 25 ಲಕ್ಷ ರೂ. ನೀಡದಿದ್ದರೆ ಅಸಭ್ಯ ಪೋಟೊಗಳನ್ನು ಬಹಿರಂಗಪಡಿಸುವುದಾಗಿ ಬೆದರಿಸುತ್ತಿದ್ದ. ಆತನಿಗೆ ಹಣ ನೀಡಲು ಬಂದಾಗ ಮಾರ್ವಿಯಾ ಪುತ್ರ ಅವರನ್ನು ಪ್ರಶ್ನಿಸಿದಾಗ ಎಲ್ಲಾ ವಿವರವನನ್ನು ಮಗನಿಗೆ ನೀಡಿದ್ದಾರೆ, ನಂತರ ಅಪ್ಪ ಮಗ ಇಬ್ಬರು ಸೇರಿ ಪೊಲೀಸರಿಗೆ ದೂರು ನೀಡಿ. ಆತನಿಗೆ 5 ಲಕ್ಷ ರೂ. ನೀಡುವುದಾಗಿ ಹೇಳಿ ಕರೆಸಿದ್ದಾರೆ. ಮಂಜುಳಾ, ಡೈಸಿ, ಶೈಲಾ, ಮೈಕೆಲ್ ಜೊಸೆಫ್ ಎಂಬುವರು  ಪೊಲೀಸರು ಬಿಸಿದ ಬಲೆಗೆ ಸಿಕ್ಕಿಬಿದ್ದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ತಂದಿಟ್ಟ ಗಿಡ ಮನೆಗೇ ಹಾನಿ ಮಾಡಿದ್ರೆ..'; 'ನೋ ಕ್ಲಾಸ್', BiggBoss ಇತಿಹಾಸದ ಅತಿದೊಡ್ಡ ನಿರ್ಧಾರದ ಸುಳಿವು ನೀಡಿದ ಕಿಚ್ಚಾ ಸುದೀಪ್

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌‌ವೇಯಲ್ಲಿ ಅಪಘಾತಕ್ಕೆ ಬಿಗ್ ಟ್ವಿಸ್ಟ್: ಸ್ನೇಹಿತನಿಂದಲೇ ಭೂಮಿಕಾ ಕೊಲೆ?

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!