ಇಸ್ಲಾಮಾಬಾದ್: ರಂಜಾನ್ ಅಂಗವಾಗಿ ಇಫ್ತಾರ್ ನಡೆಯುತ್ತಿದ್ದು, ಇಫ್ತಾರ್ ಗೂ ಮುನ್ನ ಖಾದ್ಯಗಳನ್ನು ಸೇವಿಸಿದ ವೃದ್ಧನ ಮೇಲೆ ಪೊಲೀಸ್ ಪೇದೆಯೊಬ್ಬ ಹಲ್ಲೆ ನಡೆಸಿದ್ದಾನೆ.
ಈ ಘಟನೆಯನ್ನು ವಿರೋಧಿಸಿ, ಹಲ್ಲೆಗೊಳಗಾದ ವ್ಯಕ್ತಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಒತ್ತಡ ಉಂಟಾದ ನಂತರ ಹಲ್ಲೆ ನಡೆಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ.
ರಂಜಾನ್ ಅಂಗವಾಗಿ ಇಫ್ತಾರ್ ನಡೆಯುತ್ತಿದ್ದು, ಇಫ್ತಾರ್ ಗೂ ಮುನ್ನ ಖಾದ್ಯಗಳನ್ನು ಮಾರಾಟ ಮಾಡುತ್ತಿದ್ದ ವೃದ್ಧನ ಮೇಲೆ ಪೊಲೀಸ್ ಪೇದೆಯೊಬ್ಬ ಹಲ್ಲೆ ನಡೆಸಿದ್ದಾನೆ. ಈ ಘಟನೆಯನ್ನು ವಿರೋಧಿಸಿ, ಹಲ್ಲೆಗೊಳಗಾದ ವ್ಯಕ್ತಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಒತ್ತಡ ಉಂಟಾದ ನಂತರ ಹಲ್ಲೆ ನಡೆಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಪಾಕಿಸ್ತಾನದ ಘೋಟ್ಕಿ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಅಲಿ ಹಸನ್ ಎಂಬ ಪೊಲೀಸ್ ಪೇದೆ, ಗೋಕಲ್ ದಾಸ್ ಮೇಲೆ ಹಲ್ಲೆ ನಡೆಸಿರುವ ಆರೋಪ ಎದುರಿಸುತ್ತಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಹಲ್ಲೆ ನಡೆದಿರುವ ಬಗ್ಗೆ ಗೋಕಲ್ ದಾಸ್ ಅವರ ಮೊಮ್ಮಗ ವಿನೋದ್ ಕುಮಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ನು ಗೋಕಲ್ ದಾಸ್ ಮೇಲೆ ಹಲ್ಲೆ ನಡೆದಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವೃದ್ಧನಿಗೆ ನ್ಯಾಯ ಒದಗಿಸುವಂತೆ ಅಭಿಯಾನ ಕೈಗೊಳ್ಳಲಾಗಿತ್ತು. ಈ ಘಟನೆ ಬಗ್ಗೆ ಸಿಂಧ್ ಪ್ರದೇಶದ ಐಜಿ ಎಡಿ ಖವಾಜ ತನಿಖೆಗೆ ಆದೇಶಿಸಿದ್ದಾರೆ.