ದೇಶ

ಮುಜಾಫರ್ ನಗರ: ತಂದೆಯಿಂದ ಮಗಳ ಮೇಲೆ ಅತ್ಯಾಚಾರ

Sumana Upadhyaya

ಮುಜಾಫರ್ ನಗರ: ಮಗಳ ಮೇಲೆ ತಂದೆಯೇ ಅತ್ಯಾಚಾರವೆಸಗಿದ ಘಟನೆ ಉತ್ತರ ಪ್ರದೇಶ ರಾಜ್ಯದ ಮುಜಾಫರನಗರದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮುಜಾಫರ್ ನಗರದಲ್ಲಿ ವ್ಯಕ್ತಿ ತನ್ನ 12 ವರ್ಷದ ಪುತ್ರಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬಾಲಕಿಯ ತಂದೆ ಅತ್ಯಾಚಾರವೆಸಗಿದ್ದು ಮಾತ್ರವಲ್ಲದೆ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಂದು ಹಾಕುವುದಾಗಿ ಬೆದರಿಕೆಯೊಡ್ಡಿದ್ದನಂತೆ.

SCROLL FOR NEXT