ಅರುಣ್ ಜೇಟ್ಲಿ 
ದೇಶ

ತಮಿಳುನಾಡು ಹೊರತುಪಡಿಸಿ ಜಿಎಸ್ ಟಿಗೆ ಎಲ್ಲಾ ರಾಜ್ಯಗಳಿಂದಲೂ ಬೆಂಬಲ: ಅರುಣ್ ಜೇಟ್ಲಿ

"ಜಿಎಸ್ ಟಿ ಮಸೂದೆಗೆ ವಾಸ್ತವದಲ್ಲಿ ಎಲ್ಲಾ ರಾಜ್ಯಗಳೂ ಬೆಂಬಲ ನೀಡಿವೆ ಆದರೆ ತಮಿಳುನಾಡು ರಾಜ್ಯ ಮಾತ್ರ ಕೆಲವೊಂದು ಅಂಶಗಳಿಗೆ ಬೆಂಬಲ ನೀಡಿಲ್ಲ" ಎಂದು ಹೇಳಿದ್ದಾರೆ.

ಕೋಲ್ಕತಾ: ಜಿಎಸ್ ಟಿ ಮಸೂದೆಗೆ ಸಂಬಂಧಿಸಿದಂತೆ ಮಾತನಾಡಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, " ಜಿಎಸ್ ಟಿ ಮಸೂದೆಗೆ ವಾಸ್ತವದಲ್ಲಿ ಎಲ್ಲಾ ರಾಜ್ಯಗಳೂ ಬೆಂಬಲ ನೀಡಿವೆ ಆದರೆ ತಮಿಳುನಾಡು ರಾಜ್ಯ ಮಾತ್ರ ಕೆಲವೊಂದು ಅಂಶಗಳಿಗೆ ಬೆಂಬಲ ನೀಡಿಲ್ಲ" ಎಂದು ಹೇಳಿದ್ದಾರೆ.
ಜಿಎಸ್ ಟಿ ಜಾರಿಗೆ ಯಾವುದೇ ಗಡುವಿಲ್ಲ ಎಂದು ಹೇಳಿರುವ ಅರುಣ್ ಜೆಟ್ಲಿ, 2016 ರ ಏಪ್ರಿಲ್ 1 ರಿಂದ ಜಿಎಸ್ ಟಿ ಮಸೂದೆ ಜಾರಿಗೊಳಿಸಲು ಉದ್ದೇಶಿಸಲಾಗಿತ್ತು. ಆದರೆ ಕಾಂಗ್ರೆಸ್ ಪಕ್ಷದ ಅಡಚಣೆಯಿಂದಾಗಿ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾಗದೇ ಹಾಗೆಯೇ ಉಳಿದಿದೆ ಎಂದು ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಜಿಎಸ್ ಟಿ ಮಸೂದೆಗೆ ಎಲ್ಲಾ ರಾಜ್ಯಗಳ ಬೆಂಬಲವಿದ್ದರೂ ತಮಿಳುನಾಡು ಸರ್ಕಾರ ಮಾತ್ರ ಕೆಲವು ಅಂಶಗಳಿಗೆ ವಿರೋಧಿಸಿದ್ದು, ಬದಲಾವಣೆಗಾಗಿ ಸಲಹೆಗಳನ್ನೂ ನೀಡಿವೆ ಎಂದು ಕೋಲ್ಕತಾದಲ್ಲಿ ನಡೆದ ರಾಜ್ಯ ಸರ್ಕಾರಗಳ ಹಣಕಾಸು ಸಚಿವರ ಸಮ್ಮೇಳನದಲ್ಲಿ ಭಾಗವಹಿಸಿದ್ದ ಅರುಣ್ ಜೇಟ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಹಣಕಾಸು ಸಚಿವ ಅಮಿತ್ ಮಿತ್ರ, ಹಣಕಾಸು ಸಚಿವರೂ ಆಗಿರುವ ಅರುಣಾಚಲ ಪ್ರದೇಶ, ಮೇಘಾಲಯದ ಮುಖ್ಯಮಂತ್ರಿಗಳು, ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ಸೇರಿದಂತೆ ಸಮ್ಮೇಳನದಲ್ಲಿ 22 ರಾಜ್ಯಗಳ ಹಣಕಾಸು ಸಚಿವರು ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!

ಬರ ಎಫೆಕ್ಟ್: ರೈತರ ನೆರವಿಗೆ ಧಾವಿಸಿದ ಸರ್ಕಾರ; 1,250 ಕೋಟಿ ರೂ. ಮೊದಲ ಕಂತು ಬಿಡುಗಡೆ..!