ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಜೇಮ್ಸ್ ಹಾಗೂ ಇತರ ಇಬ್ಬರ ವಿರುದ್ಧ ಜಾರಿ ನಿರ್ದೇಶನಾಲಯ ಬುಧವಾರ ಚಾರ್ಜ್ ಶೀಟ್ ದಾಖಲಿಸಿದೆ.
ಮೈಕೆಲ್ ವಿವಿಐಪಿ ಹೆಲಿಕಾಫ್ಟರ್ ಖರೀದಿ ಒಪ್ಪಂದವನ್ನು ಯಶಸ್ವಿಗೊಳಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಮತ್ತು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ರಕ್ಷಣಾ ಸಚಿವ ಎಕೆ ಆಂಟನಿಯವರನ್ನು ಭೇಟಿ ಮಾಡಿ ಚರ್ಚಿಸಿದ ಆರೋಪ ಎದುರಿಸುತ್ತಿದ್ದಾರೆ.
ಆದರೆ ಈ ಮೂವರಲ್ಲಿ ತಾನೂ ಯಾರನ್ನು ಭೇಟಿ ಮಾಡಿಲ್ಲ ಎಂದಿರುವ ಮೈಕೆಲ್, ದೆಹಲಿಯ ಜಿಮ್ಖಾನಾ ಕ್ಲಬ್‌ನಲ್ಲಿ ಎಸ್.ಪಿ. ತ್ಯಾಗಿ (ಐಎಎಫ್ ಮಾಜಿ ಮುಖ್ಯಸ್ಥ) ಅವರನ್ನು ಒಮ್ಮೆ ಭೇಟಿಯಾಗಿ ಹಸ್ತಲಾಘವ ನೀಡಿದ್ದೆ. ಆದರೆ ಗೈಡೊ ಹಷ್ಕೆ (ಇಟಲಿ ಉದ್ಯಮಿ) ಜತೆ ಸಂಪರ್ಕವಿದ್ದ ಕಾರಣ ಅವರ ಜತೆ ಅಂತರ ಕಾಯ್ದುಕೊಂಡಿದ್ದೆ ಎಂದು ಈ ಹಿಂದೆ ಹೇಳಿದ್ದರು.