ರಾಜಸ್ತಾನ(ಜೈಪುರ); ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದಿದ್ದ ಯೋಧರೊಬ್ಬರು 7 ವರ್ಷದ ನಂತರ ಸಿನಿಮೀಯ ರೀತಿಯಲ್ಲಿ ಮನೆಗೆ ಮರಳಿ ಬಂದಿರುವ ಘಟನೆ ಡೆಹ್ರಾಡೂನ್ನ ಅಲ್ವಾರ್ನಲ್ಲಿ ನಡೆದಿದೆ.
2009ರಲ್ಲಿ ಡೆಹ್ರಾಡೂನ್ನಲ್ಲಿ ನಾಲ್ಕು ಯೋಧರು ಸಂಚರಿಸುತ್ತಿದ್ದ ಸೇನೆಯ ವಾಹನ ಅಪಘಾತಕ್ಕೀಡಾಗಿತ್ತು. ಅಪಘಾತದ ನಂತರ ಕಾಣೆಯಾಗಿದ್ದ ಯೋಧರಲ್ಲಿ ಮೂವರು ಮನೆಗೆ ಮರಳಿದ್ದರು. ಆದರೆ ಧರ್ಮವೀರ್ ಯಾದವ್ ಮಾತ್ರ ಬಂದಿರಲಿಲ್ಲ. ಕಾಣೆಯಾದ ಮೂರು ವರ್ಷದ ನಂತರ ಧರ್ಮ ವೀರ್ ಮರಣಹೊಂದಿದ್ದಾನೆ ಎಂದು ಸರ್ಕಾರ ಘೊಷಿಸಿ ಆತನ ಕುಟುಂಬಕ್ಕೆ ಪಿಂಚಣಿಯನ್ನೂ ನೀಡುತ್ತಾ ಬಂದಿತ್ತು.
2009ರ ಘಟನೆಯ ನಂತರ ತನಗೆ ಏನಾಯಿತು ಎಂದು ನೆನಪಾಗ್ತುತಿಲ್ಲ. ಆದರೆ ಕಳೆದ ವಾರ ಹರಿದ್ವಾರದಲ್ಲಿ ಭಿಕ್ಷೆ ಬೇಡುತ್ತಿದ್ದುದು ನೆನಪಿದೆ. ಈ ವೇಳೆ ನನಗೆ ಒಂದು ಬೈಕ್ ಡಿಕ್ಕಿ ಹೊಡೆದಿತ್ತು, ನಂತರ ಬೈಕ್ ಸವಾರ 500 ರೂಪಾಯಿ ನೀಡಿದ್ದ. ಆ ಹಣದಲ್ಲಿ ತಾನು ದೆಹಲಿಗೆ ಬಂದು ನಂತರ ರಾಜಸ್ತಾನದಲ್ಲಿರುವ ನನ್ನ ಮನೆಗೆ ಮರಳಿದ್ದೇನೆ ಎಂದು ಧರ್ಮ ವೀರ್ಸಿಂಗ್ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಮೊದಲು ಮಗ ಬಂದು ಬಾಗಿಲು ಬಡಿದಾಗ ಆತನನ್ನು ನೋಡಿದೆ. ಆದರೆ ನನ್ನ ಕಣ್ಣನ್ನು ನಾನೇ ನಂಬಲಿಕ್ಕಾಗಲಿಲ್ಲ, ಇದು ಕನಸೋ ಇಲ್ಲ ಭ್ರಮೆಯೋ ಎಂದು ಒಂದು ಕ್ಷಣ ತಿಳಿಯದಾಯಿತು. ನಂತರ ಮಗ ಮೂರನೇ ಸಲ ಬಾಗಿಲು ಬಡಿದು ಒಳಗೆ ಬಂದಾಗ ಇದು ನಿಜ ಎಂದು ತಿಳಿಯಿತು ಎಂದು ಧರ್ಮವೀರ್ ತಂದೆ ಹೇಳುತ್ತಾರೆ.