ಸಾಂದರ್ಭಿಕ ಚಿತ್ರ 
ದೇಶ

ದೇಶದ ರಾಜಧಾನಿಯಲ್ಲಿ ಹಾಡುಹಗಲೇ ಗುಂಡಿಕ್ಕಿ ವ್ಯಕ್ಯಿಯ ಕೊಲೆ; ಪುತ್ರನಿಗೆ ಗಾಯ

ಗುರುತು ಪತ್ತೆ ಹಚ್ಚದ ವ್ಯಕ್ತಿಗಳು ಸ್ವಿಫ್ ಕಾರಿನಲ್ಲಿ ಬಂದು ಮಂಗಳವಾರ ಬೆಳಗ್ಗೆ ಗುಂಡು ಹಾರಿಸಿದ್ದಕ್ಕೆ 45 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಅವರ ಪುತ್ರನಿಗೆ ಗಾಯಗಳಾಗಿವೆ. ಈ ಘಟನೆಯ ಆಸುಪಾಸಿನಲ್ಲಿದ್ದ ಇತರ

ನವದೆಹಲಿ: ಗುರುತು ಪತ್ತೆ ಹಚ್ಚದ ವ್ಯಕ್ತಿಗಳು ಸ್ವಿಫ್ ಕಾರಿನಲ್ಲಿ ಬಂದು ಮಂಗಳವಾರ ಬೆಳಗ್ಗೆ ಗುಂಡು ಹಾರಿಸಿದ್ದಕ್ಕೆ 45 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಅವರ ಪುತ್ರನಿಗೆ ಗಾಯಗಳಾಗಿವೆ.  ಈ ಘಟನೆಯ ಆಸುಪಾಸಿನಲ್ಲಿದ್ದ ಇತರ ಮೂವರಿಗೂ ಗಾಯಗಳಾಗಿವೆ.

"ಭಜನಪುರ ಪ್ರದೇಶದಲ್ಲಿ ಗುರುತು ಪತ್ತೆ ಇಲ್ಲದ ವ್ಯಕ್ತಿಗಳು ಕೈಲಾಶ್ ನಾಥ್ ಎಂಬುವವರನ್ನು ಗುಂಡಿಕ್ಕಿ ಕೊಂಡಿದ್ದಾರೆ" ಎಂದು ಪೊಲೀಸ್ ಉಪ ಕಮಿಷನರ್ ಅಜಿತ್ ಕುಮಾರ್ ಹೇಳಿದ್ದಾರೆ

ಈ ಘಟನೆ ಮಂಗಳವಾರ ಬೆಳಗ್ಗೆ 8:15 ನಡೆದಿದೆ. ಹರ್ಷ ವಿಹಾರ್ ನ ನಿವಾಸಿ ಕೈಲಾಶ್ ನಾಥ್ ತಮ್ಮ 16 ವರ್ಷದ ಪುತ್ರ ರಾಜನ್ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಗುಂಡೇಟಿಗೆ ಬಲಿಯಾಗಿದ್ದಾರೆ.

ಪುತ್ರ ರಾಜನ್ ಮತ್ತು ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಇನ್ನುಳಿದ ಮೂವರನ್ನು ಬನವಾರಿ ಲಾಲ್, ರಾಮ್ ಲಖನ್ ಮತ್ತು ಜಾವೇದ್ ಎಂದು ಗುರುತಿಸಲಾಗಿದೆ.

ಕೊಲೆ ಪ್ರಕರಣ ದಾಖಲಿಸಿಕೊಂಡು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದು ಮೇಲ್ನೋಟಕ್ಕೆ ವೈಯಕ್ತಿಕ ದ್ವೇಷದಿಂದ ನಡೆದಿರಬಹುದಾದ ಕೊಲೆ ಎಂದು ಪೊಲೀಸರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!

ಸರ್ಕಾರ ಕೇವಲ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ: ದೆಹಲಿ ದಮನಕಾರಿ ಕ್ರಮ ಬೆಂಬಲಿಸಿದ ಸಚಿವ ಪ್ರಹ್ಲಾದ್ ಜೋಶಿ

'24 ಗಂಟೆಯೊಳಗೆ ಬಂಧಿತರ ಬಿಡುಗಡೆ ಮಾಡದಿದ್ದರೆ ನಾನೂ ಪ್ರತಿಭಟನೆ ಮಾಡುತ್ತೇನೆ': ಸೋನಮ್ ವಾಂಗ್‌ಚುಕ್ ಎಚ್ಚರಿಕೆ