ಕೊಚ್ಚಿ: ಕೊಚ್ಚಿಯ ನೌಕಾ ವಿಮಾನ ಅಂಗಳದಲ್ಲಿ ನಾವಿಕರೊಬ್ಬರ ಮೃತದೇಹ ಪತ್ತೆಯಾಗಿದೆ.
ನೌಕಾ ವಿಮಾನ ಅಂಗಳದಲ್ಲಿ ಎಲೆಕ್ಟ್ರಿಕಲ್ ಆರ್ಟಿಫಿಸೆರ್ ಆಗಿ ಕಾರ್ಯಾನಿರ್ವಹಿಸುತ್ತಿದ್ದ ರೂಪಾ ರಾಮ್ ಅವರ ಮೃತದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವುದರಿಂದ ಆತ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ.
ರಾಜಸ್ಥಾನದ ನಾಗಪುರ ಮೂಲದ ರೂಪಾ ರಾಮ್ ಅವರು ಪತ್ನಿ ಹಾಗೂ 9 ತಿಂಗಳ ಮಗುವನ್ನು ಅಗಲಿದ್ದಾರೆ.
ರೂಪಾ ರಾಮ್ ಅವರ ಕುಟುಂಬಕ್ಕೆ ಸುದ್ದಿ ಮುಟ್ಟಿಸಲಾಗಿದ್ದು, ಅವರ ಆತ್ಮಹತ್ಯೆ ಪ್ರಕರಣದ ತನಿಖೆಗೆ ಆದೇಶಿಸಲಾಗಿದೆ ಎಂದು ನೌಕಾಧಿಕಾರಿಗಳು ತಿಳಿಸಿದ್ದಾರೆ.