ಸಾಂದರ್ಭಿಕ ಚಿತ್ರ 
ದೇಶ

ಜುಲೈ 2015ರವರೆಗೆ ಪಾಕ್ ನಲ್ಲಿ 400ಕ್ಕೂ ಹೆಚ್ಚು ಭಾರತೀಯ ಕೈದಿಗಳು

ಪಾಕಿಸ್ತಾನ ಬಿಡುಗಡೆ ಮಾಡಿದ ಹೊಸ ಪಟ್ಟಿಯಲ್ಲಿ 403 ಮಂದಿ ಭಾರತೀಯರು ಜುಲೈ 2015ರವರೆಗೆ ಪಾಕಿಸ್ತಾನ ಜೈಲಿನಲ್ಲಿದ್ದು, ಅವರಲ್ಲಿ...

ನವದೆಹಲಿ: ಪಾಕಿಸ್ತಾನ ಬಿಡುಗಡೆ ಮಾಡಿದ ಹೊಸ ಪಟ್ಟಿಯಲ್ಲಿ 403 ಮಂದಿ ಭಾರತೀಯರು ಜುಲೈ 2015ರವರೆಗೆ ಪಾಕಿಸ್ತಾನ ಜೈಲಿನಲ್ಲಿದ್ದು, ಅವರಲ್ಲಿ 355 ಮೀನುಗಾರರಾಗಿದ್ದಾರೆ, ಇನ್ನು 48 ಮಂದಿ ಇತರರಾಗಿದ್ದು, ಐವರು ಮಹಿಳೆಯರಾಗಿದ್ದಾರೆ.

ಭಾರತ-ಪಾಕ್ ಸ್ನೇಹ ಉಪಕ್ರಮ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ಮಾಹಿತಿ ಸಿಕ್ಕಿದೆ. ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಇಲಾಖೆ 'ಆಗಜ್ ಇ ದೋಸ್ತಿ' ಎಂಬ ಭಾರತ-ಪಾಕ್ ರಾಷ್ಟ್ರಗಳ ಸರ್ಕಾರೇತರ ಸಂಘಟನೆಗಳ ಜಂಟಿ ಸ್ನೇಹ ಉಪಕ್ರಮಕ್ಕೆ ಈ ಉತ್ತರ ನೀಡಿದೆ.

ಸಂಘಟನೆ 2014ರಲ್ಲಿ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ದಕ್ಷತೆಯನ್ನು ಕಾಪಾಡಲು ಈ ಕ್ರಮವನ್ನು ಅನುಸರಿಸಲಾಗಿದೆ. ಬಂಧನಕ್ಕೊಳಗಾದವರ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದರಿಂದ ಅವರ ಕುಟುಂಬದವರಿಗೆ ಮಾಹಿತಿ ಗೊತ್ತಾಗುತ್ತದೆ ಎಂದು ಆಗಜ್ ಇ ದೋಸ್ತಿಯ ಸ್ಥಾಪಕ ರವಿ ನಿತೇಶ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

2008ರಲ್ಲಿ ಭಾರತ-ಪಾಕ್ ಕೈದಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ಒಪ್ಪಂದ ಮಾಡಿಕೊಂಡಿದ್ದವು. ಅದರಂತೆ ಪಟ್ಟಿಯನ್ನು ಬಿಡುಗಡೆ ಮಾಡಲು ನಿತೇಶ್ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು.ಕೈದಿಗಳ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿದರೆ ಒಂದು ವೇಳೆ ಅವರ ಬಂಧನದ ಅವಧಿ ಮುಗಿದಿದ್ದರೂ ಕೂಡ ಜೈಲಿನಲ್ಲಿ ಇರಬೇಕಾದ ಪರಿಸ್ಥಿತಿಯಿರುವುದಿಲ್ಲ ಎನ್ನುತ್ತಾರೆ ನಿತೇಶ್.

ಪಾಕಿಸ್ತಾನ ಸರ್ಕಾರ ಭಾರತೀಯ ಕೈದಿಗಳ ಪಟ್ಟಿಯನ್ನು ಸಾರ್ವಜನಿಕ ಪೋರ್ಟಲ್ ನಲ್ಲಿ ಬಿಡುಗಡೆ ಮಾಡುತ್ತಿರುವುದು ಇದೇ ಮೊದಲು. ಆಡಳಿತದ ತಾಂತ್ರಿಕ ತೊಂದರೆಯಿಂದ ಜೈಲಿನಿಂದ ಬಿಡುಗಡೆಯಾಗದಿರುವ ಕೈದಿಗಳನ್ನು ಬಿಡುಗಡೆ ಮಾಡಲು ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳ ಸರ್ಕಾರಗಳಿಗೆ ಪತ್ರ ಬರೆಯಲು ಸಂಘಟನೆ ಚಿಂತಿಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್