ಸುಂದರ್ ಪಿಚೈ 
ದೇಶ

ಗೂಗಲ್ ಸಿಇಒ ಸುಂದರ್ ಪಿಚೈ ಕೋರಾ ಅಕೌಂಟ್ ಹ್ಯಾಕ್

ಭಾರತೀಯ ಮೂಲದ ಗೂಗಲ್ ಸಿಇಓ ಸುಂದರ್ ಪಿಚೈ ಅವರ ಕೋರಾ ಅಕೌಂಟ್ ಹ್ಯಾಕ್ ಆಗಿದ್ದು, ಈ ಹಿಂದೆ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್....

ನವದೆಹಲಿ: ಭಾರತೀಯ ಮೂಲದ ಗೂಗಲ್ ಸಿಇಓ ಸುಂದರ್ ಪಿಚೈ ಅವರ ಕೋರಾ  ಅಕೌಂಟ್ ಹ್ಯಾಕ್ ಆಗಿದ್ದು, ಈ ಹಿಂದೆ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಅವರ ಟ್ವಿಟರ್ ಅಕೌಂಟ್ ಹ್ಯಾಕ್​ಮಾಡಿದ ತಂಡವೇ ಈಗ ಗೂಗಲ್ ಸಿಇಒ ಅಕೌಂಟನ್ನು ಹ್ಯಾಕ್ ಮಾಡಿದೆ ಎಂದು ಸೋಮವಾರ ಮಾಧ್ಯಮ ವರದಿಗಳು ತಿಳಿಸಿವೆ.
ಭಾನುವಾರ ರಾತ್ರಿ ಪಿಚೈ ಅವರ ಅಕೌಂಟ್ ಹ್ಯಾಕ್ ಮಾಡಲಾಗಿದ್ದು, ಹಲವು ಮಾಹಿತಿಗಳ ಸೋರಿಕೆಯಾಗಿದೆ ಎನ್ನಲಾಗಿದೆ. ಹ್ಯಾಕರ್ ತಂಡವನ್ನು ಅವರ್ ಮೈನ್ ಎಂದು ಗುರುತಿಸಲಾಗಿದ್ದು, ಪಿಚೈ ಅವರ ಹೆಸರಿನಲ್ಲಿ ಹಲವು ಸಂದೇಶಗಳನ್ನು ಪೋಸ್ಟ್ ಮಾಡಲಾಗಿದೆ. ಕೋರಾ ಅಕೌಂಟ್​ನ ಲಿಂಕ್ ಟ್ವಿಟರ್​ಗೆ ಹೊಂದಿಕೊಂಡಿರುವುದರಿಂದ ಟ್ವೀಟ್ ಅಕೌಂಟ್ ಕೂಡ ಹ್ಯಾಕ್ ಆಗಿರಬಹುದು ಎಂದು ಸಂಶಯ ವ್ಯಕ್ತಪಡಿಸಲಾಗಿದೆ.
ಪಿಚೈ ಅವರಿಗೆ ಟ್ವಿಟರ್​ನಲ್ಲಿ 5 ಲಕ್ಷದ ಎಂಟು ಸಾವಿರ ಹಿಂಬಾಲಕರಿದ್ದಾರೆ. ಹ್ಯಾಕ್ ಮಾಡಿರುವುದನ್ನು ಸ್ವತಃ ಅವರ್ ಮೈನ್ ಖಚಿತಪಡಿಸಿದ್ದು, ನಿಮ್ಮ ಅಕೌಂಟ್ ಎಷ್ಟು ಸುರಕ್ಷಿತ ಎಂದು ತಿಳಿಯಲು ಹ್ಯಾಕ್ ಮಾಡಿದ್ದೇವೆ. ಅಕೌಂಟನ್ನು ಅಪ್​ಡೇಟ್ ಮಾಡಿಕೊಳ್ಳಿ ಎಂದು ಸೂಚಿಸಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಗಣ್ಯರ ಅಕೌಂಟ್​ಗಳನ್ನು ಸುರಕ್ಷತೆ ವಿಚಾರವಾಗಿ ಹ್ಯಾಕ್ ಮಾಡಲಾಗುವುದು ಎಂದು ಎಚ್ಚರಿಸಿದೆ.
2012ರಲ್ಲಿ ಫೇಸ್​ಬುಕ್ ಸಿಇಓ ಮಾರ್ಕ್ ಜುಕರ್​ಬರ್ಗ್ ಅವರ ಟ್ವಿಟರ್ ಅಕೌಂಟ್​ನ ಪಾಸ್​ವರ್ಡ್ ಹ್ಯಾಕ್ ಮಾಡಿ ಸುದ್ದಿಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!