ದೇಶ

ಅಣ್ವಸ್ತ್ರ ಪ್ರಸರಣ ತಡೆಗೆ ಭಾರತ ನಿರಂತರ ಬದ್ಧತೆ ಪ್ರದರ್ಶಿಸಿದೆ: ಅಮೆರಿಕ

Srinivas Rao BV

ವಾಷಿಂಗ್ ಟನ್: ಭಾರತಕ್ಕೆ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆಯ ಪೂರ್ಣ ಸದಸ್ಯತ್ವ ಸಿಕ್ಕಿರುವುದರ ಬಗ್ಗೆ ಅಮೆರಿಕ ಪ್ರತಿಕ್ರಿಯೆ ನೀಡಿದ್ದು ಅಣ್ವಸ್ತ್ರ ಪ್ರಸರಣ ತಡೆ ವಿಷಯದಲ್ಲಿ ಭಾರತ ನಿರಂತರ ಬದ್ಧತೆಯನ್ನು ಪ್ರದರ್ಶಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.

ಅಣ್ವಸ್ತ್ರ ಪ್ರಸರಣ ತಡೆ ವಿಚಾರದಲ್ಲಿ ಎಂಟಿಸಿಆರ್ ನ ಎಲ್ಲಾ ಸದಸ್ಯ ರಾಷ್ಟ್ರಗಳಿಗೂ ಭಾರತ ತನ್ನ ಬದ್ಧತೆಯ ಬಗ್ಗೆ ಮನವರಿಕೆ ಮಾಡಿದ್ದು ಕಾನೂನಾತ್ಮಕವಾಗಿ ನಡೆದುಕೊಂಡಿದೆ ಎಂದು ಅಮೆರಿಕ ಸರ್ಕಾರದ ವಕ್ತಾರೆ ಎಲಿಜಬೆತ್ ಟ್ರುಡೆಯು ತಿಳಿಸಿದ್ದಾರೆ.

ಅಮೆರಿಕ ಸೇರಿದಂತೆ ಎಲ್ಲಾ 34 ಸದಸ್ಯ ರಾಷ್ಟ್ರಗಳೂ ಭಾರತ ಎಂಟಿಸಿಆರ್ ನ ಪೂರ್ಣ ಸದಸ್ಯತ್ವ ಪಡೆಯಲು ಅರ್ಹತೆ ಹೊಂದಿದೆ ಎಂದು ತೀರ್ಮಾನಿಸಿದ್ದವು, ಅದರಂತೆ ಭಾರತಕ್ಕೆ ಪೂರ್ಣ ಸದಸ್ಯತ್ವ ಸಿಕ್ಕಿದ್ದು, ಭಾರತ ಸೇರ್ಪಡೆಯಾಗಿರುವುದರಿಂದ ಅಣ್ವಸ್ತ್ರ ಪ್ರಸರಣ ತಡೆಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ.

SCROLL FOR NEXT