ದೇಶ

ಸಲಿಂಗಕಾಮಕ್ಕೆ ಮಾನ್ಯತೆ ಅರ್ಜಿ ಸಿಜೆಐ ಪೀಠಕ್ಕೆ ವರ್ಗ

Sumana Upadhyaya

ನವದೆಹಲಿ: ಸಲಿಂಗಕಾಮ ಅಪರಾಧ ಎಂದು ಹೇಳಿರುವ ಭಾರತೀಯ ದಂಡಸಂಹಿತೆಯ ಸೆಕ್ಷನ್ 377ನ್ನು ತೆಗೆದುಹಾಕುವಂತೆ ಕೆಲವು ಪ್ರಸಿದ್ಧ ವ್ಯಕ್ತಿಗಳು ಮಾಡಿರುವ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಮುಖ್ಯ ನ್ಯಾಯಾಧೀಶರನ್ನೊಳಗೊಂಡ ಪೀಠಕ್ಕೆ ಉಲ್ಲೇಖಿಸಿದೆ.

ನ್ಯಾಯಮೂರ್ತಿಗಳಾದ ಎಸ್.ಎ ಬೋಬ್ದೆ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ನ್ಯಾಯಪೀಠ, ಈ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಅವರನ್ನೊಳಗೊಂಡ ಪೀಠಕ್ಕೆ ವರ್ಗಾಯಿಸಿದರೆ ಸರಿಯಾದ ತೀರ್ಪು ನೀಡಬಹುದು ಎಂದು ಅಭಿಪ್ರಾಯಪಟ್ಟರು.ಅರ್ಜಿ ವಿಚಾರಣೆ ವೇಳೆ ಹಿರಿಯ ನ್ಯಾಯವಾದಿ ಅರವಿಂದ್ ದಾತಾರ್, ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಕ್ಯುರೇಟಿವ್ ಅರ್ಜಿ ಜೊತೆಗೆ ಈ ಅರ್ಜಿಯನ್ನು ಜೋಡಿಸಲಾಗುವುದು ಎಂದರು. ನಂತರ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಟಾಕೂರ್ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ವಿಚಾರಣೆಯನ್ನು ವರ್ಗಾಯಿಸಿತು.

ಸಲಿಂಗಕಾಮ, ಉಭಯಲಿಂಗಿ, ಲೈಂಗಿಕ ಹಕ್ಕು ನಮ್ಮ ದೇಶದಲ್ಲಿ ಮಾನವನ ಮೂಲಭೂತ ಹಕ್ಕುಗಳಲ್ಲಿ ಅವಿಭಾಜ್ಯ ಅಂಗವಾಗಿದ್ದು, ಅದಕ್ಕೆ ಕಾನೂನಿನಲ್ಲಿ ಅನುಮತಿ ನೀಡಬೇಕೆಂದು ಖ್ಯಾತನಾಮರಾದ ಚೆಫ್ ರಿತು ದಾಲ್ಮಿಯಾ, ಹೊಟೇಲ್ ಉದ್ಯಮಿ ಅಮನ್ ನಾಥ್, ಡ್ಯಾನ್ಸರ್ ಎನ್.ಎಸ್ ಜೋಹರ್ ಮೊದಲಾದವರು ಮನವಿ ಸಲ್ಲಿಸಿದ್ದರು.

SCROLL FOR NEXT