ದೇಶ

ಮಂಗಳಮುಖಿಯರು ಮಾತ್ರ ತೃತೀಯ ಲಿಂಗಿಗಳು: ಸುಪ್ರೀಂ ಸ್ಪಷ್ಟನೆ

Manjula VN

ನವದೆಹಲಿ: ತೃತೀಯಲಿಂಗಿ ವರ್ಗ ಕುರಿತಂತೆ ಸೃಷ್ಟಿಯಾಗಿದ್ದ ಅನುಮಾನಗಳಿಗೆ ಸುಪ್ರೀಂಕೋರ್ಟ್ ಗುರುವಾರ ತೆರೆಯೆಳೆದಿದ್ದು, ಮಂಗಳಮುಖಿಯರು ಮಾತ್ರ ತೃತೀಯಲಿಂಗಿಗಳ ವರ್ಗಕ್ಕೆ ಬರುತ್ತಾರೆಂದು ಸ್ಪಷ್ಟನೆ ನೀಡಿದೆ.

ತೃತೀಯಲಿಂಗಿಗಳ ಕುರಿತಂತೆ 2014ರಂದು ಸುಪ್ರೀಂಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿತ್ತು. ಆದರೆ, ಈ ಆದೇಶ ಸಾಕಷ್ಟು ಗೊಂದಲಗಳನ್ನು ಸೃಷ್ಟಿ ಮಾಡಿತ್ತು. ಹೀಗಾಗಿ ಆದೇಶ ಕುರಿತಂತೆ ಕೇಂದ್ರ ಸುಪ್ರೀಂ ಬಳಿ ಸ್ಪಷ್ಟನೆ ಕೇಳಿತ್ತು.

ಮಂಗಳಮುಖಿಯರಿಗೆ ಮೀಸಲಾತಿ ನೀಡುವಂತೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು. ಮಂಗಳಮುಖಿ ಯಾರೆಂಬುದನ್ನು ಯಾರು ಗುರ್ತಿಸುತ್ತಾರೆ. ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಮತ್ತು ಪರಿಶಿಷ್ಟ ಜಾತಿ ಆಯೋಗ ಅದನ್ನು ನಿರ್ಧರಿಸಬೇಕಾಗುತ್ತದೆ. ಸುಪ್ರೀಂಕೋರ್ಟ್ ತನ್ನ ಆದೇಶದ ಕುರಿತಂತೆ ಸ್ಪಷ್ಟನೆ ನೀಡಬೇಕು. ಮೀಸಲಾತಿ ನೀಡಿದ್ದರು ಈ ಬಗ್ಗೆ ಕೆಲ ಸಮಸ್ಯೆಗಳು ಎದುರಾಗುತ್ತಿದೆ. ಸುಪ್ರೀಂ ಕೂಡಲೇ ಸ್ಪಷ್ಟನೆ ನೀಡಬೇಕೆಂದು ಸಲಿಂಗಕಾಮಿ ಹಕ್ಕುಗಳ ಕಾರ್ಯಕರ್ತ ಅಶೋಕ್ ರೋ ಕವಿ ಅವರು ಆಗ್ರಹಿಸಿದ್ದರು.

ಇದರಂತೆ ಈ ಕುರಿತ ಅರ್ಜಿಯನ್ನು ಪರಿಶೀಲನೆ ನಡೆಸಿರುವ ಸುಪ್ರೀಂ, ಎಲ್ಲಾ ಗೊಂದಲಗಳಿಗೂ ತೆರೆಯೆಳೆದಿದ್ದು, ತೃತೀಯಲಿಂಗಿಗಳ ಕುರಿತು ಯಾವುದೇ ಗೊಂದಲಗಳು ಬೇಡ. ಮಂಗಳಮುಖಿಯರು ಮಾತ್ರ ತೃತೀಯಲಿಂಗಿಗಳ ವರ್ಗಕ್ಕೆ ಬರುತ್ತಾರೆ, ಸಲಿಂಗಿಗಳು ತೃತೀಯಲಿಂಗಿಗಳ ವರ್ಗಕ್ಕೆ ಬರುವುದಿಲ್ಲ. ಸರ್ಕಾರ ಮಂಗಳಮುಖಿಯರಿಗೆ ಮಾತ್ರ ಮೀಸಲಾತಿಯನ್ನು ನೀಡಬೇಕೆಂದು ಹೇಳಿದೆ.

ಆದೇಶ ಅಸಮಾಧಾನವನ್ನುಂಟು ಮಾಡಿದೆ ಎಂದಿರುವ ಸಲಿಂಗಕಾಮಿಗಳು ಮಂಗಳಮುಖಿಯರಿಗೆ ಮಾತ್ರ ತೃತೀಯಲಿಂಗಿ ಸ್ಥಾನ ಎಂಬ ಸುಪ್ರೀಂ ಆದೇಶವನ್ನು ಸ್ವಾಗತಿಸಿದ್ದಾರೆ.

SCROLL FOR NEXT