ಸಂತ್ರಸ್ತೆ ಜೊತೆ ಮಹಿಳಾ ಆಯೋಗದ ಅಧ್ಯಕ್ಷೆ ಸೆಲ್ಫಿ 
ದೇಶ

ರೇಪ್ ಸಂತ್ರಸ್ತೆ ಜೊತೆ ಮಹಿಳಾ ಆಯೋಗದ ಸದಸ್ಯೆ ಕ್ಲಿಕ್ಕಿಸಿಕೊಂಡ ಸೆಲ್ಫಿ ವೈರಲ್

ಅತ್ಯಾಚಾರ ಸಂತ್ರಸ್ತೆ ಜೊತೆ ರಾಜಸ್ತಾನ ಮಹಿಳಾ ಆಯೋಗದ ಸದಸ್ಯೆ ಸೆಲ್ಫಿ ತೆಗೆದು ಕೊಂಡ ಘಟನೆ ಭಾರೀ ವಿವಾದಕ್ಕೆ ಕಾರಣವಾಗಿದೆ...

ಜೈಪುರ್: ಅತ್ಯಾಚಾರ ಸಂತ್ರಸ್ತೆ ಜೊತೆ ರಾಜಸ್ತಾನ ಮಹಿಳಾ ಆಯೋಗದ ಸದಸ್ಯೆ ಸೆಲ್ಫಿ ತೆಗೆದು ಕೊಂಡ ಘಟನೆ ಭಾರೀ ವಿವಾದಕ್ಕೆ ಕಾರಣವಾಗಿದೆ.

ಉತ್ತರ ಜೈಪುರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಸಂತ್ರಸ್ತೆಯನ್ನು ಭೇಟಿಯಾಗಲು ರಾಜಸ್ತಾನ ಮಹಿಳಾ ಆಯೋಗ ತೆರಳಿತ್ತು. ಆಯೋಗದ ಅಧ್ಯಕ್ಷೆ ಸುಮನ್ ಶರ್ಮಾ ಪೊಲೀಸರಿಂದ ವಿವರಣೆ ಪಡೆಯುತ್ತಿದ್ದರು. ಈ ವೇಳೆ ಸದಸ್ಯೆ ಸೌಮ್ಯ ಗುರ್ಜಾರ್ ಸಂತ್ರಸ್ತೆಯೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ.

ಸದಸ್ಯೆ ಸೌಮ್ಯ ಗುರ್ಜಾರ್ ಕ್ಲಿಕ್ಕಿಸಿದ ಎರಡು ಸೆಲ್ಫಿಗಳು ಈಗಾಗಲೇ ಸಾಮಾಜಿಕ ಮಾಧ್ಯಮ ವಾಟ್ಸಾಪ್ ನಲ್ಲಿ ವೈರಲ್ ಆಗಿದೆ. ಇಂಥ ಅಸಂವೇದನಾಶೀಲ ನಡವಳಿಕೆಗೆ ನನ್ನ ಬೆಂಬಲ ಇಲ್ಲ, ಹೀಗಾಗಿ ಈ ಸಂಬಂಧ ವಿವರಣೆ ನೀಡುವಂತೆ ಸೌಮ್ಯ ಗುಜ್ಜಾರ್ ಅವರಿಗೆ ಸೂಚಿಸಿರುವುದಾಗಿ ಆಯೋಗದ ಅಧ್ಯಕ್ಷೆ ಸುಮನ್ ಶರ್ಮಾ ತಿಳಿಸಿದ್ದಾರೆ.

ಸೆಲ್ಫಿ ತೆಗೆದುಕೊಳ್ಳುತ್ತಿರುವ ಬಗ್ಗೆ ನನಗೆ ಅರಿವು ಇರಲಿಲ್ಲ, ಸೌಮ್ಯ ತೆಗೆದುಕೊಂಡ ಫೋಟೋ ನನಗೆ ವಾಟ್ಸಾಪ್ ನಲ್ಲಿ ಬಂತು, ಆ ಫೋಟೋ ಫ್ರೇಮ್ ನಲ್ಲಿ ನಾನು ಇರುವುದು ನೋಡಿ ನನಗೆ ಶಾಕ್ ಆಯ್ತು. ಹೀಗಾಗಿ ಕೂಡಲೇ ವಿವರಣೆ ನೀಡುವಂತೆ ಸೂಚಿಸಿರುವುದಾಗಿ  ತಿಳಿಸಿದ್ದಾರೆ.

ರಾಜಸ್ತಾನದ ಅಲ್ವಾರ್ ಜಿಲ್ಲೆಯಲ್ಲಿ ವರದಕ್ಷಿಣೆ ತರಲಿಲ್ಲ ಎಂಬ ಕಾರಣಕ್ಕೆ ಪತಿ ಮತ್ತು ಆತನ ಇಬ್ಬರು ಸಹೋದರರು 30 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದರು. ಈ ಸಂಬಂಧ ಸಂತ್ರಸ್ತೆ ಭೇಟಿ ಮಾಡಲು ಮಹಿಳಾ ಆಯೋಗ ಪೊಲೀಸ್ ಠಾಣೆಗೆ ತೆರಳಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!