ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಸಾಕ್ಷಿಯಾಗಿ(ಅಪ್ರೂವರ್)ರುವ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿಯ ಮಾಜಿ ಕಾರು ಚಾಲಕ ಶ್ಯಾಂವರ್ ರಾಯ್, ಕೊಲೆ ಪ್ರಕರಣದ ನಂತರ ಇಂದ್ರಾಣಿ ನನ್ನ ಬಳಿ ಗನ್ ಇಟ್ಟು, ಅಕ್ರಮ ಶಸ್ತ್ರಾಸ್ತ್ರ ಕೇಸ್ ನಲ್ಲಿ ಸಿಲುಕಿಸಿದ್ದಳು ಎಂದು ಹೇಳಿದ್ದಾನೆ,
ಬಾಂಬೆ ಹೈಕೋರ್ಟ್ ನಿರ್ದೇಶನದಂತೆ ಇಂದು ಸಿಬಿಐ ವಿಶೇಷ ಕೋರ್ಟ್ ಗೆ ಸಲ್ಲಿಸಿದ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಇಂದ್ರಾಣಿ ಕಾರು ಚಾಲು ಈ ಹೇಳಿಕೆ ನೀಡಿದ್ದಾನೆ.
2012ರಲ್ಲಿ ಕೊಲೆ ನಡೆದ ನಂತರ ಇಂದ್ರಾಣಿ ಮುಖರ್ಜಿ ನನಗೆ ಒಂದು ಪಾರ್ಸಲ್ ಮತ್ತು ಮೂರು ತಿಂಗಳ ಸಂಬಳ ನೀಡಿ ಕೂಡಲೇ ಹೊರಡುವಂತೆ ಸೂಚಿಸಿದ್ದರು. ಹಾಗ ನಾನು ಪಾರ್ಸಲ್ ಕವರ್ ತೆಗೆದು ನೋಡಿದಾಗ ಅದರಲ್ಲಿ ಗನ್ ಇತ್ತು. ಅದನ್ನು ಮರಳಿ ಅವರಿಗೆ ಕೊಡಲು ಎರಡು ಬಾರಿ ಯತ್ನಿಸಿದೆ. ಆದರೆ ಅದು ಸಾಧ್ಯವಾಗಲೆ ಮೂರನೇ ಬಾರಿ ಗನ್ ಕೊಡಲು ಯತ್ನಿಸಿದಾಗ ನನ್ನನ್ನು ಬಂಧಿಸಲಾಯಿತು ಎಂದು ಶ್ಯಾಂವರ್ ಹೇಳಿದ್ದಾನೆ.
ಇತ್ತೀಚಿಗಷ್ಟೆ ವಿಚಾರಾಧೀನ ಕೋರ್ಟ್ ರಾಯ್ ಯನ್ನು ಪ್ರಾಸಿಕ್ಯೂಶನ್ ಸಾಕ್ಷಿಯಾಗಿ(ಅಪ್ರೂವರ್) ಪರಿಗಣಿಸಲು ಒಪ್ಪಿಗೆ ಸೂಚಿಸಿದ ನಂತರ, ಇಂದ್ರಾಣಿ ಮುಖರ್ಜಿಯೇ ತನ್ನ ಮಗಳು ಶೀನಾ ಬೋರಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದು, ಅದಕ್ಕೆ ಆಕೆಯ ಮಾಜಿ ಪತಿ ಸಂಜೀವ್ ಖನ್ನಾ ಸಹಕರಿಸಿದ್ದಾರೆ ಎಂದು ಹೇಳಿದ್ದ.
ಇಂದು ಬಳ 2012 ಏಪ್ರಿಲ್ 24 ರಂದು ಶೀನಾ ಬೋರಾ ಹತ್ಯೆಯಾಗಿದ್ದಳು. ಸ್ಟಾರ್ ಟಿವಿಯ ಮಾಜಿ ಸಿಇಒ ಪೀಟರ್ ಮುಖರ್ಜಿ ಅವರ ಪತ್ನಿ ಇಂದ್ರಾಣಿ ತನ್ನ ಮಾಜಿ ಪತಿ ಸಿದ್ಧಾರ್ಥ್ ದಾಸ್‌ನೊಂದಿಗಿನ ದಾಂಪತ್ಯದಲ್ಲಿ ಹುಟ್ಟಿದ ಮಗಳು ಶೀನಾ ಬೋರಾ (24)ನ್ನು ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಚಾಲಕ ಶ್ಯಾಂವರ್ ರೈ ಅವರ ಸಹಾಯದಿಂದ ಹತ್ಯೆ ಮಾಡಿ ಅರಣ್ಯ ಪ್ರದೇಶದಲ್ಲಿ ಸುಟ್ಟು ಹಾಕಿದ್ದರು. ಈ ಪ್ರಕರಣದಲ್ಲಿ ಶೀನಾಳ ಅಮ್ಮ ಇಂದ್ರಾಣಿ ಮುಖರ್ಜಿ (43), ಮಾಜಿ ಪತಿ ಸಂಜೀವ್ ಖನ್ನಾ, ಮಾಜಿ ಚಾಲಕ ಶ್ಯಾಂವರ್ ರೈ , ಪೀಟರ್ ಮೊದಲಾದವರು ಆರೋಪಿಗಳಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics