ರೈಲ್ವೆ ಅನ್ರಿಸರ್ವ್ಡ್ ಟಿಕೆಟ್ ಕಾಲಾವಧಿ ಮೂರು ಗಂಟೆ ಮಾತ್ರ!
ಇನ್ಮುಂದೆ ರೈಲಿನಲ್ಲಿ ಅನ್ರಿಸರ್ವ್ಡ್ ಟಿಕೆಟ್ ಕಾಲಾವಧಿ ಮೂರು ಗಂಟೆಗಳಷ್ಟು ಕಾಲ ಮಾತ್ರ ಇರುತ್ತದೆ. ರೈಲ್ವೆ ಇಲಾಖೆಯ ಹೊಸ ನಿಯಮದ...
ನವದೆಹಲಿ: ಇನ್ಮುಂದೆ ರೈಲಿನಲ್ಲಿ ಅನ್ರಿಸರ್ವ್ಡ್ ಟಿಕೆಟ್ ಕಾಲಾವಧಿ ಮೂರು ಗಂಟೆಗಳಷ್ಟು ಕಾಲ ಮಾತ್ರ ಇರುತ್ತದೆ. ರೈಲ್ವೆ ಇಲಾಖೆಯ ಹೊಸ ನಿಯಮದ ಪ್ರಕಾರ ಮಾರ್ಚ್ 1 ರಿಂದ ಇದು ಚಾಲ್ತಿಗೆ ಬಂದಿದೆ.
199 ಕಿಮೀ ದೂರದ ವರೆಗೆ ಪ್ರಯಾಣಿಸುವ ಪ್ರಯಾಣಿಕರು ಅನ್ರಿಸರ್ವ್ಡ್ ಟಿಕೆಟ್ ಪಡೆದಿದ್ದರೆ ಮೂರು ಗಂಟೆಗಳೊಳಗೆ ರೈಲು ಹತ್ತಬೇಕಿದೆ. ಅದೇ ವೇಳೆ ಪ್ರಯಾಣಕ್ಕೆ ಮುನ್ನವೇ ವಾಪಸ್ ಬರುವ ಟಿಕೆಟ್ ಪಡೆಯುವ ಸೌಲಭ್ಯವಿತ್ತು. ಈಗ ಈ ಸೌಲಭ್ಯವೂ ಇಲ್ಲದಾಗಿದೆ.
ಈ ಹಿಂದೆ ಟಿಕೆಟ್ಗಳಿಗೆ 24 ಗಂಟೆಗಳ ಕಾಲಾವಧಿಯಿತ್ತು. ಅದನ್ನೇ ಈಗ ಮೂರು ಗಂಟೆಗಳಾಗಿ ಕಡಿತಗೊಳಿಸಲಾಗಿದೆ. ಮೂರು ಗಂಟೆಗಳ ಅವಧಿ ನಡುವೆ ಪ್ರಯಾಣ ಮಾಡದೇ ಇದ್ದರೆ ಮತ್ತೆ ಹೊಸ ಟಿಕೆಟ್ ಪಡೆಯಬೇಕಾಗುತ್ತದೆ. ಟಿಕೆಟ್ ಪಡೆದ ನಂತರ ಮೂರು ಗಂಟೆಗಳಲ್ಲಿ ಯಾವುದೇ ರೈಲು ಬರದೇ ಇದ್ದರೆ, ಅನಂತರ ಬರುವ ರೈಲಿನ ಸಮಯಕ್ಕೆ ಅನುಸಾರವಾಗಿ ಟಿಕೆಟ್ನ ಕಾಲಾವಧಿ ವಿಸ್ತರಿಸಲ್ಪಡುತ್ತದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.