ಲಕ್ನೋ : ಮುಸ್ಲಿಂ ಮದುವೆಗಳಲ್ಲಿ ಬ್ಯಾಂಡ್-ಬಾಜಾ, ನಾಚ್-ಗಾನಾ ಕಾರ್ಯಕ್ರಮಗಳನ್ನು ಆಯೋಜಿಸದಂತೆ ಉತ್ತರ ಪ್ರದೇಶದ ಮೌಲ್ವಿಗಳು ಆದೇಶ ಹೊರಡಿಸಿದ್ದಾರೆ.
ಮುಸಲ್ಮಾನರ ಮದುವೆಗಳಲ್ಲಿ ಹಣವನ್ನು ನೀರಿನಂತೆ ಖರ್ಚು ಮಾಡಲಾಗುತ್ತಿರುವುದನ್ನು ತಡೆಯುವ ಪ್ರಯತ್ನವಾಗಿ ಉತ್ತರ ಪ್ರದೇಶದ ಸಹಾರನ್‌ಪುರದ ಮೌಲ್ವಿಗಳು ತಾವು ಅಬ್ಬರದ ಮದುವೆಗಳನ್ನು ನಡೆಸಿಕೊಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಸಹಾರನ್‌ಪುರದಲ್ಲಿ ಹಿರಿಯ ಮೌಲ್ವಿ ಮೌಲಾನಾ ಕಾರಿ ಸೈಯದ್ ಇಷಾಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮೌಲ್ವಿಗಳ ಸಭೆಯಲ್ಲಿ "ಮುಸ್ಲಿಮರ ಮದುವೆಗಳಲ್ಲಿ ಬ್ಯಾಂಡ್ ಬಾಜಾ, ನಾಚ್ ಗಾನಾ' ಇರಕೂಡದು ಎಂಬ ಸರ್ವಾನುಮತದ ನಿರ್ಧಾರವನ್ನು ಕೈಗೊಳ್ಳಲಾಯಿತೆಂದು ವರದಿ ಮಾಡಲಾಗಿದೆ.
ಮುಸ್ಲಿಂ ಮದುವೆಗಳಲ್ಲಿ ಬ್ಯಾಂಡ್ ಬಾಜಾ, ನಾಚ್ ಗಾನಾ, ಹಾಡು ಕುಣಿತ, ವರದಕ್ಷಿಣೆ ಇತ್ಯಾದಿಗಳಿರುವುದು ಇಸ್ಲಾಂ ಗೆ ವಿರುದ್ಧವಾಗಿದೆ; ಆದುದರಿಂದ ಇವುಗಳನ್ನು ತಡೆಯುವ ಅಗತ್ಯವಿದೆ ಎಂದು ಸಭೆಯಲ್ಲಿ ಒಮ್ಮತದಿಂದ ಅಭಿಪ್ರಾಯಪಡಲಾಯಿತು.