ರಾಯಪುರ(ಛತ್ತೀಸ್ಗಢ): ಛತ್ತೀಸ್ಗಢದ ನಕ್ಸಲ್ ಪೀಡಿತ ಸುಕ್ಮಾ ಜಿಲ್ಲೆಯಲ್ಲಿ ಮಾವೋಗಳ ವಿರುದ್ಧ ನಡೆದ ಹಲವು ಎನ್ ಕೌಂಟರ್ ಗಳಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ(ಸಿಆರ್ಪಿಎಫ್)ಯ ಮೂವರು ಯೋಧರು ಹುತಾತ್ಮರಾಗಿದ್ದು, ಸುಮಾರು 15 ಮಂದಿ ಗಾಯಗೊಂಡಿದ್ದಾರೆ.
ಎನ್ ಕೌಂಟರ್ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಲಿಂಜು ಎನ್ ಹಾಗೂ ಫತೇಃ ಸಿಂಗ್ ಗುರುವಾರ ಅಸು ನೀಗಿದರೆ, ಅವರ ಸಹೋದ್ಯೋಗಿ ಲಕ್ಷ್ಮಣ್ ಸಿಂಗ್ ಇಂದು ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋಬ್ರಾ ಕಮಾಂಡರ್ ಪಿ.ಎಸ್. ಯಾದವ್ ಮತ್ತು ರಾಜ್ಯ ಪೊಲೀಸ್ ಜಿಲ್ಲಾ ಮೀಸಲು ಗುಂಪಿನ (ಡಿಆರ್ಜಿ) ಮುಖ್ಯಸ್ಥ ಪಿ.ಎಸ್. ಯಾದವ್ ಸೇರಿದಂತೆ ಕನಿಷ್ಠ 15 ಮಂದಿ ಗಾಯಗೊಂಡಿದ್ದಾರೆ. ನಿನ್ನೆ ಆರಂಭವಾಗಿದ್ದ ನಕ್ಸಲರ ವಿರುದ್ಧದ ಎನ್ ಕೌಂಟರ್ ಇಂದು ಬೆಳಗ್ಗೆ ಅಂತ್ಯಗೊಂಡಿದೆ.