ಗೋರಖ್‌ಪುರ್ : ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯದ ವಿವಾದಗಳು ತಣ್ಣಗಾಗುವ ಮುನ್ನವೇ ಭಾರತೀಯ ಜನತಾ ಪಕ್ಷದ ಸಂಸದ ಯೋದಿ ಆದಿತ್ಯನಾಥ್, ಜೆಎನ್‌ಯುನಲ್ಲಿ ಮುಹಮ್ಮದ್ ಅಲಿ ಜಿನ್ನಾರಂತ ಇನ್ನೊಬ್ಬರನ್ನು ಹುಟ್ಟಲು ಬಿಡುವುದಿಲ್ಲ ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ.
ಜೆಎನ್‌ಯು ನಲ್ಲಿ ಮತ್ತೊಬ್ಬ ಜಿನ್ನಾ ಹುಟ್ಟಲು ಬಿಡುವುದಿಲ್ಲ, ಅಲ್ಲಿ ಹಾಗೇನದೂ ಆದರೆ ಆತನನ್ನು ನಾಶ ಮಾಡುತ್ತೇವೆ. ನಾವು ದೇಶದ್ರೋಹಿಗಳ ವಿರುದ್ಧ ಹೋರಾಡುತ್ತೇವೆ ಎಂದು ಆದಿತ್ಯನಾಥ್ ಗುಡುಗಿದ್ದಾರೆ.
ಕನಯ್ಯಾ ಅವರ ನಾಲಗೆ ಕತ್ತರಿಸಿದವರಿಗೆ ರು. 5 ಲಕ್ಷ ಬಹುಮಾನ ನೀಡುತ್ತೇನೆ ಎಂದು ಬಿಜೆಪಿ ಯುವಮೋರ್ಚಾ ನಾಯಕ ಕುಲದೀಪ್ ವರ್ಶ್ನೆ ಹೇಳಿಕೆ ಬೆನ್ನಲ್ಲೇ ಆದಿತ್ಯನಾಥ್ ಈ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ.